ರಾಷ್ಟ್ರಗೀತೆ ಹಾಡಿ ಪ್ರಧಾನಿ ಮೋದಿ ಪಾದ ಮುಟ್ಟಿ ನಮಸ್ಕರಿಸಿದ ಗಾಯಕಿ ಮೇರಿ ಮಿಲ್ಬೆನ್

ನವದೆಹಲಿ: ಅಮೆರಿಕ ಪ್ರವಾಸದ ಸಮಾರೋಪ ಕಾರ್ಯಕ್ರಮದಲ್ಲಿ ವಿದೇಶಿ ಗಾಯಕಿಯೊಬ್ಬರು ಭಾರತದ ರಾಷ್ಟ್ರಗೀತೆ ಜನ ಗಣ ಮನ ಹಾಡಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರ ಕಾಲು ಮುಟ್ಟಿ ನಮಸ್ಕರಿಸಿದ ಘಟನೆ ನಡೆದಿದೆ. ಪ್ರಧಾನಿ ನರೇಂದ್ರ ಮೋದಿಯವರ ಅಮೆರಿಕ ಪ್ರವಾಸ ಜಗತ್ತಿನಾದ್ಯಂತ ಸುದ್ದಿಯಾಗುತ್ತಿದ್ದು, ಮೋದಿ ಅವರು ತಮ್ಮ ಅಮೇರಿಕಾ ಪ್ರವಾಸದ ವೇಳೆ ರೊನಾಲ್ಡ್ ರೇಗನ್ ಸೆಂಟರ್‌ನಲ್ಲಿ ಎನ್‌ಆರ್‌ಐ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದರು.

ಭಾರತದ ರಾಷ್ಟ್ರ ಗೀತೆ ಜನಗಣಮನ ಗೀತೆ ಮೊಳಗಿದಾಗ ಭಾರತೀಯರಿಗೆ ರೋಮಾಂಚನ, ಗೌರವ ಮೂಡುವ ಕ್ಷಣ. ಎಲ್ಲೇ ಆಗಲಿ ಎದ್ದು ನಿಂತು ಗೌರವ ಸೂಚಿಸುತ್ತಾರೆ. ಅದನ್ನೇ ಅಮೆರಿಕದ ಸಿಂಗರ್ ಮೇರಿ ಮಿಲ್ಬೆನ್ ಹಾಡಿದ್ದಾರೆ. ಪ್ರಶಸ್ತಿ ಪುರಸ್ಕೃತೆ ಅಂತಾರಾಷ್ಟ್ರೀಯ ಮಟ್ಟದ ಗಾಯಕಿ ಮೇರಿ ಬಿಲ್ ಮೆನ್ ಭಾರತದ ರಾಷ್ಟ್ರಗೀತೆಯನ್ನು ವಾಷಿಂಗ್ಚನ್ ಡಿಸಿಯ ರೊನಾಲ್ಡ್ ರೇಗನ್ ಕಟ್ಟಡದಲ್ಲಿ ನಿನ್ನೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಸಮ್ಮುಖದಲ್ಲಿ ನೆರೆದಿದ್ದ ಜನಸಮೂಹದ ಮಧ್ಯೆ ಹಾಡಿ ಜನಮನ ಸೂರೆಗೊಂಡರು. ಬಳಿಕ ಗಾಯಕಿ ಪ್ರಧಾನಿ ಮೋದಿಯವರ ಪಾದಗಳನ್ನು ಮುಟ್ಟಿ ನಮಸ್ಕರಿಸಿದ್ದು ಭಾರೀ ಮೆಚ್ಚುಗೆಗೆ ಪಾತ್ರವಾಗಿದ್ದು ವಿಡಿಯೊ ವ್ಯಾಪಕವಾಗಿ ವೈರಲ್ ಆಗುತ್ತಿದೆ.

































































































error: Content is protected !!
Scroll to Top