ಕಾರ್ಕಳ : ಕುಕ್ಕುಂದೂರು ಗ್ರಾಮದ ನಕ್ರೆ ನಿವಾಸಿ ಎಡ್ರಿನ್ ಫೆರ್ನಾಂಡೀಸ್ (52) ಜೂ. 18ರಂದು ಹೃದಯಾಘಾತದಿಂದ ನಿಧನ ಹೊಂದಿದರು. ಉದ್ಯೋಗ ನಿಮಿತ್ತ 2 ದಶಕಗಳ ಕಾಲ ದುಬೈಯಲ್ಲಿದ್ದ ಎಡ್ರಿನ್ ಕಳೆದ 5 ವರ್ಷಗಳಿಂದ ಕಟಪಾಡಿಯಲ್ಲಿ ಬೇಕರಿ ಉದ್ಯಮ ನಡೆಸುತ್ತಿದ್ದರು. ಮೃತರು ಪತ್ನಿ, ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಮೃತರ ಅಂತಿಮ ಸಂಸ್ಕಾರ ಸೋಮವಾರ ಸಂಜೆ 4 ಗಂಟೆಗೆ ನಕ್ರೆ ಚರ್ಚ್ ನಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳಿಂದ ತಿಳಿದುಬಂದಿದೆ.
ನಕ್ರೆ ಎಡ್ರಿನ್ ಫೆರ್ನಾಂಡಿಸ್ ಹೃದಯಾಘಾತದಿಂದ ನಿಧನ






























































