ಜೂ. 17 : ನೆಲ್ಲಿಕಾರು ಬಸದಿಯಲ್ಲಿ ಶ್ರೀ ಬ್ರಹ್ಮಯಕ್ಷ ದೇವರ ಸ್ತಂಭಾರೋಹಣ

ಕಾರ್ಕಳ : ಅತಿಶಯ ಶ್ರೀ ಕ್ಷೇತ್ರ ನೆಲ್ಲಿಕಾರು ಭಗವಾನ್‌ ಶ್ರೀ 1008 ಅನಂತನಾಥ ಸ್ವಾಮಿ ಸನ್ನಿಧಿಯಲ್ಲಿ ಜೂ. 17ರ ಶನಿವಾರ ಶ್ರೀ ಬ್ರಹ್ಮಯಕ್ಷ ದೇವರ ಸ್ತಂಭಾರೋಹಣ ಜರುಗಲಿದೆ. ಅಂದು ಬೆಳಿಗ್ಗೆ ಗಂಟೆ 9:15ರಿಂದ ವಿಮಾನ ಶುದ್ಧಿ, 11:55 ರಿಂದ ಶ್ರೀ ಬ್ರಹ್ಮಯಕ್ಷ ದೇವರಿಗೆ ಕಲಾರೋಪಣೆ, ಮಧ್ಯಾಹ್ನ 12:30ಕ್ಕೆ ಲಕ್ಷ ಹೂವಿನ ಪೂಜೆ, ಮಧ್ಯಾಹ್ನ 1 ಗಂಟೆಗೆ ಮಹಾಮಂಗಳಾರತಿ ಅನಂತರ ಪ್ರಸಾದ ವಿತರಣೆ, ರಾತ್ರಿ 9 ಗಂಟೆಗೆ ವಿಶೇಷ ಮಂಗಳಾರತಿ, ಸ್ತಂಭಾರೋಹಣ ನಡೆಯಲಿದೆ ಎಂದು ಅನುವಂಶೀಕ ಮೊಕ್ತೇಸರ ಬಿ. ವಿಮಲ ಕುಮಾರ ಶೆಟ್ಟಿ ಹಾಗೂ ಆಡಳಿತ ಮೊಕ್ತೇಸರ ಮಯೂರವರ್ಮ ಶೆಟ್ಟಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ನೆಲ್ಲಿಕಾರು ಬಸದಿಯ ವಿಹಂಗ ನೋಟ
































































error: Content is protected !!
Scroll to Top