ಮುಂಡ್ಲಿ : ಯುವಕ ನೇಣು ಬಿಗಿದು ಆತ್ಮಹತ್ಯೆ

ಕಾರ್ಕಳ : ಯುವಕ ಫ್ಯಾನ್‌ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಾರ್ಕಳ ಮುಂಡ್ಲಿ ಗ್ರಾಮದಲ್ಲಿ ಜೂ. 14 ರ ರಾತ್ರಿ ಸಂಭವಿಸಿದೆ. ಸಂದೀಪ್‌ ಶೆಟ್ಟಿ(29) ಎಂಬುವವರೇ ನೇಣಿಗೆ ಶರಣಾದ ಯುವಕ. ಮನೆಯ ಕೋಣೆಯೊಳಗೆ ಫ್ಯಾನ್‌ಗೆ ಕಿಟಕಿಯ ಕರ್ಟನ್‌ನಿಂದ ನೇಣು ಬಿಗಿದುಕೊಂಡಿದ್ದು, ಬೆಳಗ್ಗೆ ಮನೆಯವರ ಗಮನಕ್ಕೆ ಬಂದಿರುತ್ತದೆ. ಇವರು ಮೆಸ್ಕಾಂ ಉದ್ಯೋಗಿಯಾಗಿದ್ದರು. ಮೃತರು ತಂದೆ ತಾಯಿ, ಅಣ್ಣ ಮತ್ತು ತಂಗಿಯನ್ನು ಅಗಲಿದ್ದಾರೆ. ಇನ್ನಷ್ಟು ಹೆಚ್ಚಿನ ಮಾಹಿತಿ ತಿಳಿದು ಬರಬೇಕಾಗಿದೆ. ಅಜೆಕಾರು ಪೊಲೀಸ್‌ ಠಾಣೆಯ ಸಿಬ್ಬಂದಿ ಪರಿಶೀಲನೆ ನಡೆಸುತ್ತಿದ್ದಾರೆ.

















































error: Content is protected !!
Scroll to Top