ಉಸ್ತುವಾರಿ ಸಚಿವರ ನೇಮಕ

ಉಡುಪಿಗೆ ಲಕ್ಷ್ಮೀ ಹೆಬ್ಬಾಳ್ಕರ್‌ – ದ.ಕ. ಜಿಲ್ಲೆಗೆ ದಿನೇಶ್‌ ಗುಂಡೂರಾವ್‌

ಬೆಂಗಳೂರು : ರಾಜ್ಯ ಸರಕಾರ ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಕಗೊಳಿಸಿ ಆದೇಶ ಹೊರಡಿಸಿದ್ದು ಉಡುಪಿ ಜಿಲ್ಲೆಗೆ ಲಕ್ಷ್ಮೀ ಹೆಬ್ಬಾಳ್ಕರ್‌ ಹಾಗೂ ದ.ಕ. ಜಿಲ್ಲೆಗೆ ದಿನೇಶ್‌ ಗುಂಡೂರಾವ್‌ ಅವರನ್ನು ನೇಮಕ ಮಾಡಲಾಗಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಅಂಗವಿಕಲರು ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವ ಲಕ್ಷ್ಮೀ ಹೆಬ್ಬಾಳ್ಕರ್‌ ಬೆಳಗಾವಿ ಗ್ರಾಮಾಂತರ ಕ್ಷೇತ್ರದ ಶಾಸಕಿ. ಆರೋಗ್ಯ ಸಚಿವರಾಗಿರುವ ದಿನೇಶ್‌ ಗುಂಡೂರಾವ್‌ ಬೆಂಗಳೂರು ನಗರ ಗಾಂಧಿನಗರ ಕ್ಷೇತ್ರದ ಶಾಸಕ.
ಉಸ್ತುವಾರಿ ಸಚಿವರು ಮತ್ತು ಜಿಲ್ಲೆಯ ಹೆಸರು ಇಂತಿದೆ.
ಡಿ.ಕೆ. ಶಿವಕುಮಾರ್- ಬೆಂಗಳೂರು ನಗರ
ಡಾ.ಜಿ ಪರಮೇಶ್ವರ್ – ತುಮಕೂರು
ಹೆಚ್.ಕೆ.ಪಾಟೀಲ್- ಗದಗ
ಕೆ.ಹೆಚ್. ಮುನಿಯಪ್ಪ -ಬೆಂಗಳೂರು ಗ್ರಾಮಾಂತರ
ರಾಮಲಿಂಗಾ ರೆಡ್ಡಿ- ರಾಮನಗರ
ಕೆ.ಜೆ.ಜಾರ್ಜ್- ಚಿಕ್ಕಮಗಳೂರು
ಎಂ.ಬಿ.ಪಾಟೀಲ್ – ವಿಜಯಪುರ
ಹೆಚ್.ಸಿ.ಮಹದೇವಪ್ಪ- ಮೈಸೂರು
ಸತೀಶ್ ಜಾರಕಿಹೊಳಿ- ಬೆಳಗಾವಿ
ಪ್ರಿಯಾಂಕ್ ಖರ್ಗೆ – ಕಲಬುರಗಿ
ಶಿವಾನಂದ ಪಾಟೀಲ್ -ಹಾವೇರಿ
ಜಮೀರ್ ಅಹಮದ್ ಖಾನ್ -ವಿಜಯನಗರ
ಶರಣಬಸಪ್ಪ ದರ್ಶನಾಪುರ-ಯಾದಗಿರಿ
ಈಶ್ವರ್ ಖಂಡ್ರೆ- ಬೀದರ್
ಚಲುವರಾಯ ಸ್ವಾಮಿ-ಮಂಡ್ಯ
ಎಸ್ . ಎಸ್. ಮಲ್ಲಿಕಾರ್ಜುನ-ದಾವಣಗೆರೆ
ಸಂತೋಷ ಲಾಡ್-ಧಾರವಾಡ
ಡಾ. ಶರಣಪ್ರಕಾಶ್ ಪಾಟೀಲ್-ರಾಯಚೂರು
ಆರ್.ಬಿ. ತಿಮ್ಮಾಪುರ-ಬಾಗಲಕೋಟೆ
ಕೆ. ವೆಂಕಟೇಶ್-ಚಾಮರಾಜನಗರ
ಶಿವರಾಜ್ ತಂಗಡಗಿ -ಕೊಪ್ಪಳ
ಡಿ.ಸುಧಾಕರ್-ಚಿತ್ರದುರ್ಗ
ಬಿ. ನಾಗೇಂದ್ರ-ಬಳ್ಳಾರಿ
ಕೆ.ಎನ್. ರಾಜಣ್ಣ-ಹಾಸನ
ಭೈರತಿ ಸುರೇಶ್ -ಕೋಲಾರ
ಮಂಕಾಳ ವೈದ್ಯ -ಉತ್ತರಕನ್ನಡ
ಮಧುಬಂಗಾರಪ್ಪ -ಶಿವಮೊಗ್ಗ
ಡಾ.ಎಂ.ಸಿ. ಸುಧಾಕರ್ -ಚಿಕ್ಕಬಳ್ಳಾಪುರ
ಎನ್.ಎಸ್. ಬೋಸರಾಜು- ಕೊಡಗು







































error: Content is protected !!
Scroll to Top