ಕಾರ್ಕಳ ಮೈನ್ ಶಾಲೆಗೆ ಉಚಿತ ನೋಟ್ಸ್ ಬುಕ್ ಹಾಗೂ ಲೇಖನ ಸಾಮಗ್ರಿಗಳ ವಿತರಣೆ

ಕಾರ್ಕಳ : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾರ್ಕಳ ಮೈನ್ ಇಲ್ಲಿನ ವಿದ್ಯಾರ್ಥಿಗಳಿಗೆ ಶಾಲಾ ಹಿತೈಷಿ ಹಾಗೂ ಕೊಡುಗೈ ದಾನಿ ಶಾಂತಾರಾಂ ಶೆಣೈ ಅವರು ನೀಡಿದ ನೋಟ್ ಬುಕ್ ಹಾಗೂ ಲೇಖನ ಸಾಮಗ್ರಿಗಳನ್ನು ಜೂ.7ರಂದು ವಿತರಿಸಲಾಯಿತು. ಶಾಲೆಯ ಪೂರ್ವ ವಿದ್ಯಾರ್ಥಿಯಾಗಿರುವ ನಿವೃತ್ತ ಲೆಕ್ಕ ಪರಿಶೋಧಕ ಕೆ. ಕಮಲಾಕ್ಷ ಕಾಮತ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಕ್ಕಳಿಗೆ ನೋಟ್ ಬುಕ್ ಮತ್ತು ಲೇಖನ ಸಾಮಗ್ರಿಗಳನ್ನು ವಿತರಿಸಿ ಶುಭ ಹಾರೈಸಿದರು.
ಕೆ. ಕಮಲಾಕ್ಷ ಕಾಮತ್ ಅವರು ತಾಯಿ ರಮಾಬಾಯಿ ಕಾಮತ್ ಮತ್ತು ತಂದೆ ವಾಸುದೇವ ಕಾಮತರ ಸ್ಮರಣಾರ್ಥವಾಗಿ ಶಾಲಾ ಶಿಕ್ಷಕರ ಕೊಠಡಿಗೆ ಐದು ಮೇಜುಗಳನ್ನು ಕೊಡುಗೆಯಾಗಿ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಡಿ.ಎಂ.ಸಿ ಅಧ್ಯಕ್ಷೆ ಶೋಭಾ ವಹಿಸಿದ್ದರು. ಈ ಸಂದರ್ಭದಲ್ಲಿ ಶಾಲಾ ಎಸ್.ಡಿ.ಎಂ.ಸಿಯ ಪದಾಧಿಕಾರಿಗಳು ಹಾಗೂ ಶಾಲಾ ಶಿಕ್ಷಕಿಯರಾದ ಶ್ರೇಯಾ, ವಿನುತಾ ಮತ್ತು ವಿದ್ಯಾರ್ಥಿಗಳ ಪೋಷಕರು ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯಿನಿ ಪ್ರತಿಮಾ ಎಸ್. ಸ್ವಾಗತಿಸಿ, ಮಧುಶ್ರೀ ಕಾರ್ಯಕ್ರಮ ನಿರೂಪಿಸಿದರು. ಅಶ್ವಿನಿ ವಂದಿಸಿದರು.error: Content is protected !!
Scroll to Top