ಕಲ್ಲಗುಪ್ಪೆ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ಕಲಿಕಾ ಸಾಮಗ್ರಿ ವಿತರಣೆ

ಕಾರ್ಕಳ : ಸ. ಹಿ. ಪ್ರಾ. ಶಾಲೆ ಕಲ್ಲಗುಪ್ಪೆಯಲ್ಲಿ ಜೂ. 7ರಂದು ಉಚಿತ ನೋಟ್ ಬುಕ್ ವಿತರಣಾ ಕಾರ್ಯಕ್ರಮ ನಡೆಯಿತು. ಶಾಲೆಯ ಹಿತೈಷಿಗಳು ಮತ್ತು ಹಳೆ ವಿದ್ಯಾರ್ಥಿಗಳಾದ ಜಯರಾಜ್, ಮೀನಾಕ್ಷಿ, ಸುಬ್ಬುಲಕ್ಷ್ಮಿಮತ್ತು ಸ್ನೇಹ ಇವರುಗಳು ನೀಡಿದ ನೋಟ್ ಬುಕ್‌ಗಳನ್ನು ಶಾಲಾ ಮಕ್ಕಳಿಗೆ ವಿತರಿಸಲಾಯಿತು.
ಎಸ್‌ಡಿಎಂಸಿ ಅಧ್ಯಕ್ಷ ವಿಜಯ ಶೆಟ್ಟಿ, ದಾನಿಗಳಾದ ಇಸ್ರೋ ನಿವೃತ್ತ ವಿಜ್ಞಾನಿ ಜನಾರ್ಧನ್ ರಾವ್, ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಸುಮಿತ್ರ, ಎಸ್‌ಡಿಎಂಸಿ ಉಪಾಧ್ಯಕ್ಷೆ ದೀಪ್ತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ಮನೋಹರ ಹೂ ನೀಡಿ ಅತಿಥಿಗಳನ್ನು ಸ್ವಾಗತಿಸಿ, ದೈಹಿಕ ಶಿಕ್ಷಣ ಶಿಕ್ಷಕಿ ಸುಮಲತಾ ವಂದಿಸಿ, ಸಹ ಶಿಕ್ಷಕಿ ಶಾಲಿನಿ ಕಾರ್ಯಕ್ರಮ ನಿರೂಪಿಸಿದರು.error: Content is protected !!
Scroll to Top