ಕಲ್ಯಾ : ಮರದಿಂದ ಬಿದ್ದು ಯುವಕ ಮೃತ್ಯು


ಕಾರ್ಕಳ : ರಬ್ಬರ್ ಮರ ಹತ್ತಿ ಕೆಲಸ ಮಾಡುತ್ತಿರುವ ಸಂದರ್ಭ ಯುವಕನೋರ್ವ ಬಿದ್ದು ಮೃತಪಟ್ಟ ಘಟನೆ ಕಲ್ಯಾ ಗ್ರಾಮದಲ್ಲಿ ನಡೆದಿದೆ. ಎ. 29ರಂದು ಕಾರ್ಕಳ ತಾಲೂಕು ಕಲ್ಯಾ ಗ್ರಾಮದ ಅಶೋಕನಗರದ ಕೋಟಿಬೆಟ್ಟು ಬಿಜು ಎಂಬವರ ರಬ್ಬರ್ ತೋಟದಲ್ಲಿ ಮರ ಹತ್ತಿ ಕೆಲಸ ಮಾಡುತ್ತಿದ್ದ ತ್ರಿಪುರ ರಾಜ್ಯ ರಾಂಪುರದ ಅವಯ್ ಮಂಜ ದೆಬ್ರಮ್ (34) ಆಕಸ್ಮಿಕವಾಗಿ ಕೆಳಕ್ಕೆ ಬಿದ್ದರು. ಪರಿಣಾಮ ಕುತ್ತಿಗೆಯ ಬಳಿ ಮತ್ತು ಬೆನ್ನಿಗೆ ಗಾಯವಾಗಿದ್ದು, ಅವರನ್ನು ತಕ್ಷಣವೇ ಚಿಕಿತ್ಸೆಗಾಗಿ ಕಾರ್ಕಳ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಚಿಕಿತ್ಸೆಗೆ ಸ್ಪಂದಿಸದ ಅವರು ಜೂ. 3ರಂದು ಕೊನೆಯುಸಿರೆಳೆದರು. ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.



































































































































































error: Content is protected !!
Scroll to Top