ಕಾಡುಹೊಳೆ ತಿರುವಿನಲ್ಲಿ ಸರಣಿ ಅಪಘಾತ : ಅಗ್ನಿ ಶಾಮಕ ಸಿಬ್ಬಂದಿ ಸೇರಿ ಆರು ಮಂದಿಗೆ ಗಾಯ

ಕಾರ್ಕಳ : ಕಾಡುಹೊಳೆ ಸೇತುವೆ ಬಳಿ ಕಾರೊಂದು ಬೈಕ್‌ ಹಾಗೂ ಸ್ಕೂಟಿಗೆ ಡಿಕ್ಕಿ ಹೊಡೆದ ಪರಿಣಾಮ 6 ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ. ಜೂ. 4ರ ಸಂಜೆ 3:30ರ ವೇಳೆ ಕಾರ್ಕಳದಿಂದ ಮುದ್ರಾಡಿ ಸಾಗುತ್ತಿದ್ದ ಬೈಕ್‌ಗೆ ಹೆಬ್ರಿ ಭಾಗದಿಂದ ಅಜೆಕಾರು ಕಡೆ ಬರುತ್ತಿದ್ದ ಕಾರು ಡಿಕ್ಕಿಯಾಗಿ ಬಳಿಕ ಸ್ಕೂಟಿಗೆ ಹೊಡೆದಿದೆ. ಬೈಕ್‌ನಲ್ಲಿ ಸಾಗುತ್ತಿದ್ದ ಕಾರ್ಕಳ ಅಗ್ನಿಶಾಮಕ ದಳದ ಸಿಬ್ಬಂದಿ ಮುದ್ರಾಡಿ ಮನೋಹರ್‌ ಪ್ರಸಾದ್‌ ಹಾಗೂ ಅವರ ಪತ್ನಿ, ಸ್ಕೂಟಿಯಲ್ಲಿದ್ದ ದಂಪತಿ ಮತ್ತಿಬ್ಬರು ಮಕ್ಕಳು ಗಾಯಗೊಂಡಿರುತ್ತಾರೆ. ಗಾಯಗೊಂಡವರನ್ನು ಕಾರ್ಕಳ ರೋಟರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರು ಚಾಲಕಿ ಅಜೆಕಾರು ಬಂಡಸಾಲೆ ನಿವಾಸಿ ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಅಜೆಕಾರು ಪೊಲೀಸರು ಭೇಟಿ ನೀಡಿದ್ದಾರೆ.error: Content is protected !!
Scroll to Top