ಆಕ್ಷೇಪಣೆಯಿದ್ದಲ್ಲಿ ಪೂರಕ ದಾಖಲೆಯೊಂದಿಗೆ ಲಿಖಿತ ದೂರು ಸಲ್ಲಿಸಲು ಕೃಷಿಕರಲ್ಲಿ ಮನವಿ
ಕಾರ್ಕಳ : ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ 2021-22ರ ಮುಂಗಾರು ಹಂಗಾಮಿನ ಬೆಳೆ ವಿಮೆ ನೋಂದಣಿ ಬೆಳೆ ಸಮೀಕ್ಷೆ ದತ್ತಾಂಶದೊಂದಿಗೆ ತಾಳೆಯಾಗದ ಪ್ರಸ್ತಾವನೆಗಳನ್ನು ತಾಲೂಕು ಮಟ್ಟದ ಅಧಿಕಾರಿಗಳು ಪರಿಶೀಲಿಸಿದ ಅನಂತರ ಅಂತಿಮವಾಗಿ ವಿಮಾ ಸಂಸ್ಥೆಯವರು ತಿರಸ್ಕರಿಸುತ್ತಾರೆ. ತಿರಸ್ಕ್ರತ ಪ್ರಕರಣಗಳ ಪಟ್ಟಿಯನ್ನು ಸಹಾಯಕ ಕೃಷಿ ನೀರ್ದೇಶಕರ ಕಚೇರಿ ಕಾರ್ಕಳ, ರೈತ ಸಂಪರ್ಕ ಕೇಂದ್ರ ಕಾರ್ಕಳ ಹಾಗೂ ರೈತ ಸಂಪರ್ಕ ಕೇಂದ್ರ ಅಜೆಕಾರು ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದೆ. ಈ ಬಗ್ಗೆ ತಮಗೆ ಯಾವುದೇ ಆಕ್ಷೇಪಣೆ ಇದ್ದಲ್ಲಿ ಪೂರಕವಾದ ದಾಖಲೆಗಳೊಂದಿಗೆ ಒಂದು ವಾರದ ಒಳಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರ ಕಾರ್ಕಳ, ಅಜೆಕಾರು/ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಕಾರ್ಕಳ ಇಲ್ಲಿಗೆ ಲಿಖಿತವಾಗಿ ಸಲ್ಲಿಸಲು, ಸಹಾಯಕ ಕೃಷಿ ನೀರ್ದೇಶಕರ ಕಚೇರಿ ಪ್ರಕಟನೆಯಲ್ಲಿ ತಿಳಿಸಿದೆ.














































