ಕಾರ್ಕಳ : ನಿಟ್ಟೆ ಭ್ರಮರಿ ಬಳಿ ಆಟೋ ರಿಕ್ಷಾಕ್ಕೆ ಬೈಕ್ ಡಿಕ್ಕಿ ಹೊಡೆದ ಘಟನೆ ಸೋಮವಾರ ನಡೆದಿದ್ದು, ಪರಿಣಾಮ ಆಟೋ ಪ್ರಯಾಣಿಕರು ಗಾಯಗೊಂಡಿರುತ್ತಾರೆ. ಕಾರ್ಕಳ ಪಡುಬಿದ್ರೆ ರಾಜ್ಯ ಹೆದ್ದಾರಿಯಲ್ಲಿ ಹರೀಶ್ ಕೋಟ್ಯಾನ್ ಎಂಬುವವರು ಆಟೋ ರಿಕ್ಷಾವನ್ನು ಲೆಮಿನಾ ಕಡೆಯಿಂದ ಭ್ರಮರಿ ಕಡೆಗೆ ಚಲಾಯಿಸಿಕೊಂಡು ಬರುತ್ತಿರುವಾಗ ಕಾರ್ಕಳದಿಂದ ನಿಟ್ಟೆ ಕಡೆಗೆ ಸಾಗುತ್ತಿದ್ದ ವಿಶ್ವಾಸ್ ಅವರ ಬೈಕ್ ಡಿಕ್ಕಿಯಾಗಿದೆ. ವಾಹನವೊಂದನ್ನು ಓವರ್ ಟೇಕ್ ಮಾಡುವ ಭರದಲ್ಲಿ ಬೈಕ್ ಮುಂಭಾಗದಲ್ಲಿದ್ದ ಆಟೋ ರಿಕ್ಷಾಕ್ಕೆಗೆ ಡಿಕ್ಕಿಯಾಗಿದ್ದು ಬೈಕ್ ಹಾಗೂ ರಿಕ್ಷಾ ಪಲ್ಟಿಯಾಗಿದೆ. ರಿಕ್ಷಾದಲ್ಲಿದ್ದ ಬೇಬಿ ಪೂಜಾರ್ತಿ, ಶಾಲಿನಿ ಹಾಗೂ ಸುಲೋಚನಿ ಅವರು ಗಾಯಗೊಂಡಿದ್ದಾರೆ. ರಿಕ್ಷಾ ಚಾಲಕ ಹಾಗೂ ಬೈಕ್ ಸವಾರನೂ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಈ ಕುರಿತು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಟ್ಟೆಯಲ್ಲಿ ರಿಕ್ಷಾಕ್ಕೆ ಬೈಕ್ ಡಿಕ್ಕಿ – ಐವರಿಗೆ ಗಾಯ

































