ಪೇಟೆ ಧಾರಣೆ : ಕಾರ್ಕಳದಲ್ಲಿ ತರಕಾರಿ ದರ ಇಂತಿದೆ

ಕಾರ್ಕಳ : ನಾಳೆ ಮತ್ತು ನಾಡಿದ್ದು ಸಭೆ ಸಮಾರಂಭಗಳು ಹೆಚ್ಚಾಗಿ ಇರುವುದರಿಂದ ಕೆಲವು ತರಕಾರಿಗಳ ಬೇಡಿಕೆ ಮತ್ತು ಬೆಲೆಯಲ್ಲಿ ತುಸು ಏರಿಕೆಯಾಗಿದೆ. ಇನ್ನು ಬಾಳೆ ಎಲೆಯ ಬೆಲೆ 4 ರೂ. (ಒಂದು ಎಲೆಗೆ) ಆಗಿದ್ದು, ಮಾರುಕಟ್ಟೆಯಲ್ಲಿ ಅಲಸಂಡೆ, ತೊಂಡೆಕಾಯಿ, ಕ್ಯಾರೆಟ್‌, ಟೊಮೆಟೋ ಮತ್ತು ಶುಂಠಿಗೆ ಹೆಚ್ಚಿನ ಬೇಡಿಕೆಯನ್ನು ಗಮನಿಸಬಹುದಾಗಿದೆ. ಶುಂಠಿಯ ಬೆಲೆ 120 ರಿಂದ 180 ಕ್ಕೆ ಏರಿಕೆಯಾಗಿದೆ. ಈರುಳ್ಳಿ ಬೆಲೆ ಕಡಿಮೆಯಿದ್ದು 16 ರಿಂದ 20 ರೂ. ಇದೆ.

ಇಂದಿನ ತರಕಾರಿ ದರ ಕೆ.ಜಿ.ಗೆ
ಕೊತ್ತಬಂರಿ ಸೊಪ್ಪು: 140 ರೂ., ಮುಳ್ಳುಸೌತೆ : 25 ರೂ., ಶುಂಠಿ : 180 ರೂ., ಟೊಮ್ಯಾಟೋ : 25-30 ರೂ. , ನೀರುಳ್ಳಿ : 16 – 20ರೂ., ಬಟಾಟೆ : 25 ರೂ., ಬೆಳ್ಳುಳ್ಳಿ : 140 ರೂ., ಸೌತೆ : 25 ರೂ., ಬೀನ್ಸ್‌ : 70 – 100 ರೂ., ಕಾಯಿಮೆಣಸು : 60 ರೂ., ಕ್ಯಾರೆಟ್‌ : 50 -60 ರೂ., ಬೀಟ್ರೋಟ್‌ : 36-40 ರೂ., ಕ್ಯಾಬೇಜ್‌ : 25 ರೂ., ಹೂಕೋಸು : 50 ರೂ., ಬೆಂಡೆ : 50 ರೂ., ಕುಂಬಳಕಾಯಿ : 25 -30 ರೂ., ಅಲಸಂಡೆ : 60 ರೂ., ತೊಂಡೆಕಾಯಿ : 25-60 ರೂ., ಹಾಗಲಕಾಯಿ : 60 ರೂ., ಗೆಣಸು : 30 ರೂ., ಲಿಂಬೆ : 100 -120 ರೂ., ಮೂಲಂಗಿ : 30 ರೂ., ದೊಣ್ಣೆಮೆಣಸು : 60 ರೂ., ಉದ್ದ ಮೆಣಸು : 70 ರೂ., ಬದಣೆ : 40 ರೂ., ಗುಳ್ಳ : 70 ರೂ.









































































































error: Content is protected !!
Scroll to Top