ಎನ್‌ಕೌಂಟರ್‌ ಸ್ಪೆಷಲಿಸ್ಟ್‌ ದಯಾ ನಾಯಕ್‌ ಮರಳಿ ಕ್ರೈಂ ಬ್ರಾಂಚ್‌ಗೆ

ಮುಂಬಯಿ : ಎನ್‌ಕೌಂಟರ್‌ ಸ್ಪೆಷಲಿಸ್ಟ್‌ ಖ್ಯಾತಿಯ ದಯಾ ನಾಯಕ್‌ ಅವರನ್ನು ಕ್ರೈಂ ಬ್ರಾಂಚ್‌ ಯುನಿಟ್‌ 1ಕ್ಕೆ ನೇಮಕ ಮಾಡಿ ಮಹಾರಾಷ್ಟ್ರ ಸರಕಾರ ಆದೇಶ ಹೊರಡಿಸಿದೆ. ದಯಾ ನಾಯಕ್‌ ಕಾರ್ಕಳದ ಅಜೆಕಾರು ಸಮೀಪ ಎಣ್ಣೆಹೊಳೆಯವರು. ಈ ಮೊದಲು ಕ್ರೈಂಬ್ರಾಂಚ್‌ನಲ್ಲಿದ್ದ ಅವರು ಬಳಿಕ ವರ್ಗಾವಾಗಿ ಬೇರೆ ಬೇರೆ ಕಡೆ ಸೇವೆ ಸಲ್ಲಿಸಿ ವಾಪಾಸು ಕ್ರೈಂ ಬ್ರಾಂಚ್‌ಗೆ ಬಂದಿದ್ದಾರೆ.
ಕ್ರೈಂ ಬ್ರಾಂಚ್‌ನಲ್ಲಿರುವಾಗ 100ಕ್ಕೂ ಅಧಿಕ ಪಾತಕಿಗಳನ್ನು ಎನ್‌ಕೌಂಟರ್‌ನಲ್ಲಿ ಸದೆಬಡಿದು ಎನ್‌ಕೌಂಟರ್‌ ಸ್ಪೆಷಲಿಸ್ಟ್‌ ಎಂಬ ಬಿರುದು ಸಂಪಾದಿಸಿದ್ದರು. ಮುಂಬಯಿಯಲ್ಲಿ ಭೂಗತ ಜಗತ್ತಿನ ಪಾತಕಿಗಳ ಚಟುವಟಿಕೆ ತೀವ್ರಗೊಂಡ ಸಮಯದಲ್ಲಿ ದಯಾ ನಾಯಕ್‌ ಕ್ರೈಂಬ್ರಾಂಚ್‌ನಲ್ಲಿ ಅಧಿಕಾರಿಯಾಗಿ ಎನ್‌ಕೌಂಟರ್‌ ಶುರು ಮಾಡಿದ್ದರು.









































































































error: Content is protected !!
Scroll to Top