ಮೂಡುಬಿದಿರೆ ಉಮಾನಾಥ ಕೋಟ್ಯಾನ್ ಜಯಭೇರಿ
ಪುತ್ತೂರಿಗೆ ಈ ಬಾರಿ ಅಶೋಕ್ ರೈ
ಮಂಗಳೂರು : 2023ರ ಕರ್ನಾಟಕ ವಿಧಾನಸಭೆ ಚುನಾವಣೆ ಮಂಗಳೂರು- ಉಳ್ಳಾಲ ಕ್ಷೇತ್ರದ ಹಾಲಿ ಶಾಸಕ, ಕಾಂಗ್ರೆಸ್ ಅಭ್ಯರ್ಥಿ ಯು.ಟಿ. ಖಾದರ್ ಗೆಲುವಿನ ನಗೆ ಬೀರಿದ್ದಾರೆ. ಬಿಜೆಪಿಯ ಅಭ್ಯರ್ಥಿ ಸತೀಶ್ ಕುಂಪಲ ಅವರನ್ನು ಬೃಹತ್ ಮತಗಳಿಂದ ಮಣಿಸಿದ್ದು ಈ ಮೂಲಕ ಉಳ್ಳಾಲ ಪ್ರತಿನಿಧಿಸುವ ಐದನೇ ಅವಧಿಯ ಶಾಸಕರಾಗಿ ಆಯ್ಕೆಯಾಗಿದ್ದಾರೆ. 2018 ರ ರಾಜ್ಯ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಂದ ಗೆದ್ದ ಏಕೈಕ ಕಾಂಗ್ರೆಸ್ ಶಾಸಕರಾಗಿದ್ದರು.

ಮೂಡುಬಿದಿರೆಯಲ್ಲಿ ಉಮಾನಾಥ ಕೋಟ್ಯಾನ್ ಗೆಲುವು
ಮೂಡುಬಿದಿರೆ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಉಮಾನಾಥ ಎ. ಕೋಟ್ಯಾನ್‌ರವರು ಶಾಸಕರಾಗಿ ದ್ವಿತೀಯ ಬಾರಿಗೆ ಪುನರ್ ಆಯ್ಕೆಗೊಂಡಿದ್ದಾರೆ. ವಿಧಾನಸಭಾ ಚುನಾವಣೆಗೆ ಮೂಡುಬಿದಿರೆ ಕ್ಷೇತ್ರದಿಂದ 3 ಬಾರಿ ಸ್ಪರ್ಧಿಸಿದ್ದ ಅವರು 2 ಬಾರಿ ಗೆಲುವು ಕಂಡಾಂತಾಗಿದೆ. ಪ್ರತಿಸ್ಪರ್ಧಿಯಾಗಿದ್ದ ಕಾಂಗ್ರೆಸ್‌ನ ಮಿಥುನ್ ಎಂ. ರೈ ಸೋಲುಂಡಿದ್ದಾರೆ.
ಪುತ್ತೂರಿನಲ್ಲಿ ಅಶೋಕ್ ರೈ ಗೆಲುವು
ಪುತ್ತೂರಿನಲ್ಲಿ ಪಕ್ಷೇತರ ಅಭ್ಯರ್ಥಿ ಅರುಣ್ ಪುತ್ತಿಲ ಮತ್ತು ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈ ನಡುವೆ ಪೈಪೋಟಿಯಿದ್ದು, ಅಂತಿಮವಾಗಿ ಅಲ್ಪ ಮತಗಳ ಅಂತರದಲ್ಲಿ ಅಶೋಕ್ ರೈ ಗೆಲುವು ಸಾಧಿಸಿದ್ದಾರೆ.







































