ವಾಪಾಸು ಕಳುಹಿಸಿದ ಪೊಲೀಸ್
ಉಡುಪಿ: ಕಾಲಿಗೆ ಮೊಬೈಲ್ ಕಟ್ಟಿಕೊಂಡು ಮತದಾನ ಕೇಂದ್ರಕ್ಕೆ ಆಗಮಿಸಿದ ಬೈಂದೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯ ಏಜಂಟ್ನನ್ನು ದ್ವಾರದಲ್ಲೇ ತಡೆದು ಪೊಲೀಸರು ವಾಪಾಸು ಕಳುಹಿಸಿದ್ದಾರೆ.
ಬಲಗಾಲಿನಲ್ಲಿ ಮೊಬೈಲ್ ಕಟ್ಟಿಕೊಂಡು ಕೇಸರಿ ಶಾಲನ್ನು ಧರಿಸಿಕೊಂಡು ಪೊಲೀಸರ ಕಣ್ಣು ತಪ್ಪಿಸಲು ಯತ್ನಿಸಿದ್ದ ಬೈಂದೂರು ಬಿಜೆಪಿ ಅಭ್ಯರ್ಥಿಯ ಏಜೆಂಟ್ ಸದಾಶಿವ ಕಂಚಿಗೋಡು ಎಂಬಾತನನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಮಚ್ಚಿಂದ್ರ ಹಾಕೆ ದ್ವಾರದಲ್ಲೇ ತಡೆಹಿಡಿದು ವಾಪಾಸು ಕಳುಹಿಸಿದ ಘಟನೆ ಶನಿವಾರ ಮತ ಎಣಿಕೆಯ ನಡೆಯುವ ಸ್ಯೆಂಟ್ ಸಿಸಿಲಿ ಶಾಲೆಯಲ್ಲಿ ನಡೆಯಿತು.































































