ಕಾರ್ಕಳ : ವೈಯಕ್ತಿಕ ನಿಂದನೆ ಮತ್ತು ಅಪಪ್ರಚಾರವನ್ನೇ ಬಂಡವಾಳವಾಗಿರಿಸಿಕೊಂಡು ಚುನಾವಣಾ ಕಣಕ್ಕೆ ಇಳಿದಿರುವ ಕಾಂಗ್ರೆಸ್, ಕಾರ್ಕಳ ಕ್ಷೇತ್ರದ ಸುಸಂಸ್ಕೃತ ಮತ್ತು ಸಜ್ಜನಿಕೆಯ ಮನಸ್ಸುಗಳನ್ನು ಕದಡುವ ಕೆಲಸ ಮಾಡುತ್ತಿದೆ ಎಂದು ಬಿಜೆಪಿ ಅಭ್ಯರ್ಥಿ ಸುನಿಲ್ ಕುಮಾರ್ ಖೇದ ವ್ಯಕ್ತಪಡಿಸಿದರು.
ಮೆ 4ರಂದು ಬಜಗೋಳಿ ಪೇಟೆಯಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು.
ನಿಂದನೆ, ದ್ವೇಷ ಹರಡುವ ಕಾರ್ಯಕ್ಕೆ ಮುಂದಾಗುವ ಬದಲು ಪ್ರಜಾಪ್ರಭುತ್ವದ ಆಶಯದಂತೆ ಚುನಾವಣೆ ಎದುರಿಸಿ ಎಂದು ಕಾಂಗ್ರೆಸ್‌ನರಿಗೆ ತಿಳಿಸಿದ ಸುನಿಲ್ ಕುಮಾರ್ ಕಾರ್ಕಳದಲ್ಲಾದ ಅಭಿವೃದ್ಧಿ ವಿಚಾರಗಳ ಬಗ್ಗೆ ಚರ್ಚೆಗೆ ಬನ್ನಿ ಎಂದು ಬಹಿರಂಗವಾಗಿ ಸವಾಲು ಹಾಕಿದರು.
ಬಿಜೆಪಿ ಪ್ರಮುಖರಾದ ಮಣಿರಾಜ್ ಶೆಟ್ಟಿ, ಕೆ.ಪಿ. ಶೆಣೈ, ಉದ್ಯಮಿಗಳಾದ ರವೀಂದ್ರ ಶೆಟ್ಟಿ ಬಜಗೋಳಿ, ಶಶಿಧರ್ ಶೆಟ್ಟಿ ಬರೊಡ, ಸದಾಶಿವ ಸಾಲಿಯಾನ್, ಹರೀಶ್ ಡಿ. ಸಾಲಿಯಾನ್ ಪುಣೆ, ಮುಡಾರು ಗ್ರಾಮ ಪಂಚಾಯತ್ ಅಧ್ಯಕ್ಷ ಸುರೇಶ್ ಶೆಟ್ಟಿ, ಜಿ.ಪಂ. ಮಾಜಿ ಸದಸ್ಯ ಉದಯ ಕೋಟ್ಯಾನ್, ಬಿಜೆಪಿ ಉಡುಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ವಿಖ್ಯಾತ್ ಶೆಟ್ಟಿ, ಅಲ್ಪಸಂಖ್ಯಾತ ಮೊರ್ಚಾದ ಜೆರಾಲ್ಡ್ ಡಿ ಸಿಲ್ವ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸುರೇಶ್ ಸಾಲ್ಯಾನ್ ಮುಡಾರು ಕಾರ್ಯಕ್ರಮ ನಿರ್ವಹಿಸಿದರು.






















