ಮನ್‌ ಕಿ ಬಾತ್‌ ಶತಕದ ಸಂಭ್ರಮದಲ್ಲಿ ಮೋದಿ ಮಾತು

ದೆಹಲಿ: ನರೇಂದ್ರ ಮೋದಿ ಪ್ರಧಾನ ಮಂತ್ರಿ ಆದ ಬಳಿಕ 2014ರ ಅ.4ರಂದು ಮನ್ ಕೀ ಬಾತ್ ಆರಂಭವಾಗಿದ್ದು, ಇಂದು ಶತತಕದ ಸಂಭ್ರಮವನ್ನು ಆಚರಿಸುತ್ತಿದೆ. ಇಂದು ದೇಶದೆಲ್ಲೆಡೆ 4 ಲಕ್ಷ ಸ್ಥಳಗಳಲ್ಲಿ ಮನ್ ಕಿ ಬಾತ್‌ ಕಾರ್ಯಕ್ರಮದ ನೇರ ಪ್ರಸಾರ ವೀಕ್ಷಿಸಲು ಅವಕಾಶ ಕಲ್ಪಿಸಿಲಾಗಿತ್ತು. ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ, ಇಂದು ನಾವು 100ನೇ ಪ್ರಸಾರಕ್ಕೆ ತಲುಪಿದ್ದೇವೆ. ಈ ಮನ್​​ ಕೀ ಬಾತ್​ನಲ್ಲಿ ನಾನು ಮಾತನಾಡುವಾಗ ಸಾಕಷ್ಟು ಬಾರಿ ಬಾವುಕನಾಗಿದ್ದೇನೆ. ಸಮಾಜದ ಅನೇಕ ರಿಯಲ್​ ಹೀರೋಗಳನ್ನು ನೆನೆಯಲು ಮನ್​​ ಕೀ ಬಾತ್​​ ಒಂದು ಉತ್ತಮ ಕಾರ್ಯಕ್ರಮವಾಗಿದೆ ಎಂದರು.

ಮನ್​ ಕೀ ಬಾತ್​ ನನಗೆ ಒಂದು ಕ್ರಾರ್ಯಕ್ರಮವಲ್ಲ ಪೂಜೆ
ಮನ್​ ಕೀ ಬಾತ್​ ನನಗೆ ಒಂದು ಕ್ರಾರ್ಯಕ್ರಮವಲ್ಲ, ಆಸ್ತಾ, ವೃತ, ಪೂಜೆ ಇದ್ದ ಹಾಗೆ. ನನಗೆ ಮನ್​ ಕೀ ಬಾತ್​ ಈಶ್ವರಿ ರೂಪವಾದ ಜನರ ಪೂಜೆಯಾಗಿದೆ ಎಂದು ಮೋದಿ ಹೇಳಿದರು

ಬೇಟಿ ಬಚಾವೋ ಬೇಟಿ ಪಡಾವೋ​​ ಕಾರ್ಯಕ್ರಮಕ್ಕೆ ಉತ್ತೇಜನ
ಬೇಟಿ ಬಚಾವೋ ಬೇಟಿ ಪಡಾವೋ​​ ಕಾರ್ಯಕ್ರಮಕ್ಕೆ ಉತ್ತೇಜನ ನೀಡಲಾಯಿತು. ಇದರಿಂದ ನಾರಿಶಕ್ತಿಯ ಅನಾವರಣಾವಾಯಿತು. ಹರಿಯಾಣದ ಸುನಿಲ್​ ಅವರ “ಸೆಲ್ಫಿ ವಿತ್​​​ ಬೇಟಿ” ಅಭಿಯಾನವನ್ನು ನೆನೆಯಬೇಕು. ಇವರ ಈ ಅಭಿಯಾನಕ್ಕೆ ದೇಶದಲ್ಲಿ ಸಾಕಷ್ಟು ಪ್ರಶಂಸೆ ಪಡೆಯಿತು ಎಂದರು.

ಸ್ವಸಹಾಯ ಮಹಿಳಾ ಸಂಘಗಳು, ಯುವ ಉದ್ಯಮಿಗಳ ಜತೆ ಸಂವಾದ
ಮನ್​ ಕೀ ಬಾತ್​ ಮೂಲಕ ಸ್ವಸಹಾಯ ಮಹಿಳಾ ಸಂಘಗಳು, ಯುವ ಉದ್ಯಮಿಗಳ ಜತೆ ಸಂವಾದ ನಡೆಸಲಾಯಿತು. ಆತ್ಮನಿರ್ಭರ್​ ಯೋಜನೆ ಕುರಿತು ದೇಶದ ಯುವಕರಿಗೆ ಮಾಹಿತಿ ನೀಡಲಾಯಿತು. ಶಿಕ್ಷಣ, ವೈದ್ಯಕೀಯ ಸೌಲಭ್ಯ, ಜಲ ಸಂರಕ್ಷಣೆ, ಸರ್ಕಾರಿ ಯೋಜನೆಗಳ ಬಗ್ಗೆ ತಿಳಿಯಿತು.

ಪ್ರವಾಸೋದ್ಯಮ ಸಾಕಷ್ಟು ಅಭಿವೃದ್ದಿಯಾಯಿತು
ಮನ್​ ಕೀ ಬಾತ್​ ಮೂಲಕ ಪ್ರವಾಸೋದ್ಯಮ ಸಾಕಷ್ಟು ಅಭಿವೃದ್ದಿಯಾಯಿತು. ಹರಿಯಾಣದಲ್ಲಿ ಲಿಂಗಾನುಪಾತ ಪ್ರಮಾಣ ಸುಧಾರಣೆಯಾಗಿದೆ. ಮನ್​ ಕೀ ಬಾತ್​ನಿಂದ ಬೇರೆಯವರಿಂದ ಕಲಿಯಲು ಅನುಕೂಲವಾಯಿತು. ಮನ್​ ಕೀ​ ಬಾತ್​​ ಕಾರ್ಯಕ್ರಮ ಸಮಾಜಕ್ಕೆ ಪ್ರೇರಣೆಯಾಗಿದೆ. ವೋಕಲ್ ಫಾರ್ ಲೋಕಲ್ ಮತ್ತಷ್ಟು ಗಟ್ಟಿಯಾಗಿದೆ.

ಮನ್​​ ಕೀ ಬಾತ್​ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ ಯುನೆಸ್ಕೋ ಡಿಜಿ
ಯುನೆಸ್ಕೋ ಡಿಜಿ ಮನ್​​ ಕೀ ಬಾತ್​ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ಭಾರತದ ಶಿಕ್ಷಣ ಮತ್ತು ಸಂಸ್ಕೃತಿ ಬಗ್ಗೆ ಧ್ವನಿ ಎತ್ತುವಲ್ಲಿ ಪ್ರಧಾನಿ ಮೋದಿಯವರ ಮನ್​ ಕೀ ಬಾತ್​ ಪ್ರೇಣಾದಾಯಕವಾಗಿದೆ ಎಂದು ಹೇಳಿದರು.

















































error: Content is protected !!
Scroll to Top