ದೂರದೃಷ್ಟಿಯ ಶಾಸಕ ಸುನಿಲ್‌ ಕುಮಾರ್‌ ಅವರನ್ನು ಕಳೆದುಕೊಳ್ಳಬೇಡಿ – ಮುಂಬೈ ಸಂಸದ ಗೋಪಾಲ ಶೆಟ್ಟಿ ಮನವಿ

ಸುನಿಲ್‌ ಸೋತರೆ ಅದು ಕಾರ್ಕಳಕ್ಕಾಗುವ ದೊಡ್ಡ ನಷ್ಟ

ಕಾರ್ಕಳ : ಬೈಲೂರು ಉಮಿಕ್ಕಳ ಬೆಟ್ಟದಲ್ಲಿ ನಿರ್ಮಾಣವಾಗಿರುವ ಪರಶುರಾಮ ಥೀಮ್‌ ಪಾರ್ಕ್‌ ದೂರದೃಷ್ಟಿಯ ಯೋಜನೆ. ದೂರದೃಷ್ಟಿ ಯೋಜನೆ, ಸಮರ್ಪಕ ಅನುಷ್ಠಾನದ ಮೂಲಕ ಕ್ಷೇತ್ರವನ್ನು ಅಭಿವೃದ್ಧಿ ಪಡಿಸುತ್ತಿರುವ ಶಾಸಕ ಸುನಿಲ್‌ ಕುಮಾರ್‌ ಅವರನ್ನು ಕ್ಷೇತ್ರದ ಜನತೆ ಮತ್ತೆ ಗೆಲ್ಲಿಸಿಕೊಡಬೇಕೆಂದು ಮುಂಬೈ ಬೊರ್ವಿಲಿ ಸಂಸದ ಗೋಪಾಲ ಶೆಟ್ಟಿ ಹೇಳಿದರು. ಅವರು ಎ. 26ರಂದು ಮಾಳ ಗ್ರಾಮದಲ್ಲಿ ಮತಯಾಚಿಸಿ ಮಾತನಾಡಿದರು.

ಬೈಲೂರು ಉಮಿಕ್ಕಳ ಬೆಟ್ಟದ ಮೇಲೆ ಪರಶುರಾಮ ಪ್ರತಿಮೆಯೊಂದಿಗೆ ಥೀಮ್ ಪಾರ್ಕ್ ನಿರ್ಮಾಣ ಮಾಡಿರುವುದು ಒಂದು ಅಪೂರ್ವ ಕಾರ್ಯ. ಇದನ್ನು ನೋಡುವಾಗ ನಿಜಕ್ಕೂ ದಿಗ್ಬ್ರಮೆಗೊಂಡೆ. ಇದರೊಂದಿಗೆ ಸಂಸ್ಕೃತಿ – ಪರಂಪರೆ ಉಳಿಸುವ ಕಾರ್ಯವೂ ನಡೆದಿದೆ ಎಂದು ಹೇಳಿದ ಗೋಪಾಲ್‌ ಅವರು ಸುನಿಲ್‌ ಕುಮಾರ್‌ ಅವರನ್ನು ಗೆಲ್ಲಿಸಿಕೊಡದಿದ್ದಲ್ಲಿ ಅದು ಕಾರ್ಕಳಕ್ಕಾಗುವ ದೊಡ್ಡ ನಷ್ಟ ಎಂದರು.
ನಾನು ಪರಶುರಾಮ ಥೀಮ್‌ ಪಾರ್ಕ್‌ ಉದ್ಘಾಟನೆ ಸಂದರ್ಭ ಕಾರ್ಕಳ ಬರಬೇಕಿತ್ತು. ಪ್ರಧಾನಿ ಮೋದಿಯವರ ಭೇಟಿ ನಿಮಿತ್ತ ಅಂದು ಅದು ಸಾಧ್ಯವಾಗಿರಲಿಲ್ಲ. ಥೀಂ ಪಾರ್ಕ್ ಡೆವಲಪ್ಮೆಂಟ್ ಬಗ್ಗೆ ಮುಂಬಯಿಯಲ್ಲಿರುವ ಕರಾವಳಿ ಜನತೆಗೆ ತಿಳಿದಿದೆ. ನನ್ನ ಜೀವನದಲ್ಲಿ ಮುಂಬಯಿನಂತಹ ನಗರದಲ್ಲಿ 25ಕ್ಕೂ ಅಧಿಕ ಮಹಾಪುರುಷರ ಪ್ರತಿಮೆ ಸ್ಥಾಪಿಸಿದ್ದು ಕಂಡಿದ್ದೇನೆ. ಅದು ಎಲ್ಲ ಸೇರಿದರೂ ಪರಶುರಾಮ ಥೀಂ ಪಾರ್ಕ್‌ ಗೆ ಸಮನಾಗದು ಎಂದು ಗೋಪಾಲ ಹೇಳಿದರು.

ಶ್ರಮಜೀವಿಯನ್ನು ಪ್ರಚಂಡ ಬಹುಮತದೊಂದಿಗೆ ಗೆಲ್ಲಿಸಿ
ಕಾರ್ಕಳದಲ್ಲಿ ಸನಾತನ ಧರ್ಮದ ಉಳಿವಿನ ಕಾರ್ಯವಾಗುತ್ತಿದೆ. ಇಂತಹ ಶ್ರಮಜೀವಿ, ಹೊಸತನ ಕಾಣುವ ಮತ್ತೊಬ್ಬ ಕನಸುಗಾರ ಶಾಸಕ ಸಿಗುವುದು ಕಷ್ಟ. ಹಾಗಾಗಿ ಕ್ಷೇತ್ರದ ಜನ ಮತ್ತೊಮ್ಮೆ ಸುನಿಲರನ್ನು ಪ್ರಚಂಡ ಬಹುಮತದಿಂದ ಗೆಲ್ಲಿಸಿ. ಕ್ಷೇತ್ರದ ಮತ್ತಷ್ಟು ಅಭಿವೃದ್ದಿಗೆ ಅವಕಾಶ ಕಲ್ಪಿಸಿಕೊಡಿಯೆಂದು ಮನವಿ ಮಾಡಿಕೊಂಡರು.

ಕಟ್ಟ ಕಡೆ ವ್ಯಕ್ತಿಗೂ ನ್ಯಾಯ – ಸುನಿಲ್
ಬಿಜೆಪಿ ಅಭ್ಯರ್ಥಿ ವಿ. ಸುನಿಲ್ ಕುಮಾರ್ ಮಾತನಾಡಿ, ಈದು-ಮಾಳದಂತಹ ಗ್ರಾಮೀಣ ಭಾಗದ ರಸ್ತೆಗಳಿಗೆ ಕಾಯಕಲ್ಪ, ಸೇತುವೆ ನಿರ್ಮಾಣ, ಕಿಂಡಿ ಅಣೆಕಟ್ಟು, ವಿದ್ಯುತ್ ಸಮಸ್ಯೆಗೆ ಪರಿವರ್ತಕ, ಸಬ್ ಸ್ಟೇಶನ್, ಬಡವರಿಗೆ ಹಕ್ಕುಪತ್ರ ವಿತರಣೆ ಮೊದಲಾದ ಮೂಲಭೂತ ಸೌಕರ್ಯ ಕಲ್ಪಿಸಿ ಕಟ್ಟ ಕಡೆಯ ವ್ಯಕ್ತಿಯ ಸಮಸ್ಯೆಗೂ ಸ್ಪಂದಿಸಿದ್ದೇನೆ. ಕ್ಷೇತ್ರದ ಜನತೆ ಮತ್ತೊಮ್ಮೆ ಆಶೀರ್ವದಿಸಿದರೆ ಗ್ರಾಮಗಳ ಕಲ್ಯಾಣಕ್ಕೆ ಭರಪೂರ ಕೊಡುಗೆ ನೀಡುವುದಕ್ಕೆ ಅವಕಾಶವಾಗುತ್ತದೆ ಎಂದರು. ವೇದಿಕೆಯಲ್ಲಿ ಪ್ರಮುಖರಾದ ರೋಹಿತ್ ಹೆಗಡೆ ಎರ್ಮಲ್, ಹರೀಶ್ ಶೆಟ್ಟಿ ಎರ್ಮಲ್, ಸ್ಥಳೀಯ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.









































































































error: Content is protected !!
Scroll to Top