ಕಾರ್ಕಳ : ಈ ಬಾರಿ ರಂಜಾನ್ ಹಬ್ಬವೂ ಶನಿವಾರವೆ ಆದ ಕಾರಣ ಕಾರ್ಕಳದ ಸಂತೆಯಲ್ಲಿ, ತರಕಾರಿ ಅಂಗಡಿಯಲ್ಲಿ ಬೆಳಗ್ಗೆ ಜನದಟ್ಟಣೆ ಸ್ವಲ್ಪ ಅಧಿಕವಾಗಿಯೇ ಇತ್ತು. ಇನ್ನು ತರಕಾರಿ ದರದಲ್ಲೂ ಸ್ವಲ್ಪ ಪ್ರಮಾಣದ ಬದಲಾವಣೆಯಾಗಿದ್ದು, ಮುಳ್ಳುಸೌತೆ, ಶುಂಠಿ ಮತ್ತು ಕೊತ್ತಂಬರಿ ಸೊಪ್ಪಿಗೆ ಹೆಚ್ಚಿನ ಬೇಡಿಕೆಯಿದೆ. ಬೀನ್ಸ್ ದರ ಕಳೆದ ವಾರಕ್ಕಿಂತ ಕಡಿಮೆಯಾಗಿದ್ದು, 120 ರಿಂದ 90 ಕ್ಕೆ ಇಳಿಕೆಯಾಗಿದೆ.
ಇಂದಿನ ತರಕಾರಿ ದರ ಕೆ.ಜಿ.ಗೆ
ಕೊತ್ತಬಂರಿ ಸೊಪ್ಪು: 120 ರೂ., ಮುಳ್ಳುಸೌತೆ : 40-50 ರೂ., ಶುಂಠಿ : 120 ರೂ., ಟೊಮ್ಯಾಟೋ : 25 ರೂ. , ನೀರುಳ್ಳಿ : 18 – 20ರೂ., ಬಟಾಟೆ : 25 ರೂ., ಬೆಳ್ಳುಳ್ಳಿ : 130 ರೂ., ಸೌತೆ : 20 ರೂ., ಬೀನ್ಸ್ : 90 – 80 ರೂ., ಕಾಯಿಮೆಣಸು : 80 ರೂ., ಕ್ಯಾರೆಟ್ : 40 ರೂ., ಬೀಟ್ರೋಟ್ : 30-40 ರೂ., ಕ್ಯಾಬೇಜ್ : 25 ರೂ., ಹೂಕೋಸು : 40 ರೂ., ಬೆಂಡೆ : 60 ರೂ., ಕುಂಬಳಕಾಯಿ : 25 -30 ರೂ., ಅಲಸಂಡೆ : 60 – 70 ರೂ., ತೊಂಡೆಕಾಯಿ : 40-60 ರೂ., ಹಾಗಲಕಾಯಿ : 70 ರೂ., ಗೆಣಸು : 30 ರೂ., ಲಿಂಬೆ : 180 ರೂ., ಮೂಲಂಗಿ : 35 ರೂ., ದೊಣ್ಣೆಮೆಣಸು : 80 ರೂ., ಉದ್ದ ಮೆಣಸು : 100 ರೂ., ಬದಣೆ : 30 ರೂ., ಗುಳ್ಳ : 40 ರೂ.















































































