ಕಾರ್ಕಳದಲ್ಲಿ ಸಂಭ್ರಮದ ಈದ್‌ಉಲ್‌ಫಿತ್ರ್‌ ಆಚರಣೆ

ಕಾರ್ಕಳ : ಮುಸ್ಲಿಂ ಧರ್ಮೀಯರ ಪವಿತ್ರ ಈದ್‌ಉಲ್‌ಫಿತ್ರ್‌ ಹಬ್ಬವನ್ನು ಏ.22ರಂದು ಸಂಭ್ರಮದಿಂದ ಆಚರಿಸಲಾಯಿತು. ಒಂದು ತಿಂಗಳ ಕಾಲ ಪವಿತ್ರ ರಂಜಾನ್‌ ಮಾಸದ ಉಪವಾಸದ ಬಳಿಕ ಶುಕ್ರವಾರ ರಾತ್ರಿ ಚಂದ್ರ ದರ್ಶನದ ಬಳಿಕ ಇಂದು ಹಬ್ಬವನ್ನು ಆಚರಿಸಲಾಯಿತು. ಕಾರ್ಕಳದ ವಿವಿಧ ಮಸೀದಿಗಳಲ್ಲಿ ಮುಸ್ಲಿಂ ಬಾಂಧವರಿಂದ ವಿಶೇಷವಾಗಿ ಸಾಮೂಹಿಕ ಪ್ರಾರ್ಥನೆಯು ನಡೆಯಿತು. ಸಾಲ್ಮರದ ಮಸೀದಿಯಲ್ಲಿ ಜಾಮೀಯ ಮಸೀದಿಯ ಧರ್ಮಗುರುಗಳಾದ ಮೌಲಾನ ಝಹೀರ್‌ ಅಹ್ಮದ್ ಖಾಸಿಮಿಯವರ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆ ನೆರವೇರಿತು. ಜಮಾತ್‌ಮ ಅಧ್ಯಕ್ಷ ಅಶ್ಫಾಕ್‌ ಅಹ್ಮದ್‌ ಸಮಸ್ತ ಜನತೆಗೆ ಈದ್‌ ಶುಭಾಶಯ ಕೋರಿದರು.

















































error: Content is protected !!
Scroll to Top