ನಾಮಪತ್ರ ಸಲ್ಲಿಕೆ ದಿನ ಪ್ರತಿ ಬೂತ್‌ನಿಂದ 200 ಮಂದಿ ಭಾಗಿ – ಮಹಾವೀರ ಹೆಗ್ಡೆ

ಪಕ್ಷವನ್ನೇ ಉಸಿರಾಗಿಸಿಕೊಂಡಿದ್ದ ವ್ಯಕ್ತಿಗೆ ನ್ಯಾಯ ಕೊಡದ ಕಾಂಗ್ರೆಸ್‌ನಿಂದ ಮತದಾರರಿಗೆ ನ್ಯಾಯ ದೊರೆಯುವುದೇ ? ಮಣಿರಾಜ್‌ ಪ್ರಶ್ನೆ

ಕಾರ್ಕಳ : ಎ. 19ರಂದು ಬಿಜೆಪಿ ಅಭ್ಯರ್ಥಿ ವಿ. ಸುನಿಲ್‌ ಕುಮಾರ್‌ ಅವರು ನಾಮಪತ್ರ ಸಲ್ಲಿಸಲಿದ್ದು, ಅಂದು ಪ್ರತಿ ಬೂತ್‌ ನಿಂದ ಸುಮಾರು 200 ಮಂದಿಯಂತೆ ಭಾಗವಹಿಸಲಿದ್ದಾರೆ ಎಂದು ಬಿಜೆಪಿ ಕ್ಷೇತ್ರಾಧ್ಯಕ್ಷ ಮಹಾವೀರ ಹೆಗ್ಡೆ ತಿಳಿಸಿದರು.


ಅವರು ಎ. 17ರಂದು ಕಾರ್ಕಳ ಬಿಜೆಪಿ ಕಚೇರಿಯಲ್ಲಿ ಸುದ್ಧಿಗೋಷ್ಠಿ ಆಯೋಜಿಸಿ ಮಾತನಾಡಿದ ಅವರು ನಾಮಪತ್ರ ಸಲ್ಲಿಕೆ ದಿನ ಸಾವಿರಾರು ಮಂದಿ ಭಾಗವಹಿಸಲಿದ್ದಾರೆ. ಇದೊಂದು ರಾಜ್ಯದಲ್ಲೇ ಮಾದರಿ ಕಾರ್ಯಕ್ರಮವಾಗಲಿದೆ ಎಂದರು.
ಮೇ. 10 ರಂದು ನಡೆಯಲಿರುವ ಚುನಾವಣೆಗೆ ಪೂರ್ವಭಾವಿಯಾಗಿ ಪಕ್ಷದ ವತಿಯಿಂದ ಪ್ರತಿ ಗ್ರಾಮಗಳಲ್ಲೂ ಕಾರ್ಯಕರ್ತರ ಸಮಾವೇಶ ಮತ್ತು ಬೂತ್‌ ಮಟ್ಟದ ಸಭೆಗಳು ನಡೆಯುತ್ತಿದೆ ಎಂದರು.
ಕಳೆದ 5 ವರ್ಷಗಳಲ್ಲಿ ಜನರ ಬಳಿ ಬಾರದ ಕಾಂಗ್ರೆಸ್‌ ಈಗ ಅಪಪ್ರಚಾರದ ಮೂಲಕ ಜನರನ್ನು ತಲುಪುತ್ತಿದೆ. ಕೊರೋನ ಸಂಕಷ್ಟ ಕಾಲದಲ್ಲಿ ಸುನಿಲ್‌ ಕುಮಾರ್‌ ಕಾರ್ಯ ಸ್ಮರಣೀಯ. ತಾಲೂಕಿನ ಗ್ರಾಮ ಗ್ರಾಮದಲ್ಲೂ ಅಭಿವೃದ್ಧಿಪರ ಕೆಲಸಗಳು ಮಾತನಾಡುತ್ತಿವೆ. ಕಾರ್ಕಳದಲ್ಲಿ ಬಿಜೆಪಿ ಮಾಡಿದಂತಹ ಜನಪರ ಕೆಲಸ ಕಾರ್ಯಗಳ ಬಗ್ಗೆ ಜನತೆಗೆ ಅರಿವಿದೆ. ಈ ಬಾರಿಯ ಚುನಾವಣೆಯಲ್ಲೂ ಸುನಿಲ್‌ ಕುಮಾರ್‌ ಅವರ ಗೆಲುವಿಗೆ ಕ್ಷೇತ್ರದ ಜನತೆ ಬೆಂಬಲ ನೀಡಲಿದ್ದಾರೆ ಮಹಾವೀರ ಹೆಗ್ಡೆ ವಿಶ್ವಾಸ ವ್ಯಕ್ತಪಡಿಸಿದರು.

ನಾಚಿಕೆಗೇಡಿನ ಸಂಗತಿ
ರಾಜ್ಯ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಣಿರಾಜ್‌ ಶೆಟ್ಟಿ ಮಾತನಾಡಿ, ಪಕ್ಷವನ್ನೇ ಉಸಿರಾಗಿಸಿಕೊಂಡಿದ್ದ ಕಾಂಗ್ರೆಸ್‌ನ ಪ್ರಾಮಾಣಿಕ ಕಾರ್ಯಕರ್ತನಿಗೆ ಕಾಂಗ್ರೆಸ್ ಟಿಕೆಟ್‌ ನೀಡದಿರುವುದು‌ ನಾಚಿಗೇಡಿನ ಸಂಗತಿ. ಕಾರ್ಕಳದಲ್ಲಿ ಕಾಂಗ್ರೆಸ್ ಪಕ್ಷವನ್ನು ಕಳೆದ 5 ವರ್ಷದಲ್ಲಿ ಜೀವಂತವಾಗಿರಿಸಿದ ಒಬ್ಬ ಪ್ರಾಮಾಣಿಕ ಕಾರ್ಯಕರ್ತನಿಗೆ ನ್ಯಾಯವನ್ನು ನೀಡಲಾಗದ ಕಾಂಗ್ರೆಸ್‌ ಪಕ್ಷದಿಂದ ಮತದಾರರಿಗೆ ನ್ಯಾಯ ಸಿಗಬಹುದೇ ? ಎಂದು ಪ್ರಶ್ನಿಸಿದರು.

ಕಳೆದ ಎರಡು ದಿನಗಳಿಂದ ಜಾತಿ ರಾಜಕೀಯದ ಬಗ್ಗೆ ಮಾತು ಕೇಳಿ ಬರುತ್ತಿದೆ. ಆದರೆ, ಕಾರ್ಕಳದ ಜನ ಜಾತಿ ರಾಜಕೀಯಕ್ಕೆ ಸೊಪ್ಪು ಹಾಕಲಾರರು ಎಂದು ಮಣಿರಾಜ್‌ ಶೆಟ್ಟಿ ಅಭಿಪ್ರಾಯಪಟ್ಟರು. ಬಿಜೆಪಿ ಪ್ರಧಾನ ಕಾರ್ಯದರ್ಶಿ ನವೀನ್‌ ನಾಯಕ್‌, ಜಯರಾಂ ಸಾಲ್ಯಾನ್‌, ಬಿಜೆಪಿ ವಿಸ್ತಾರಕ್ ಪ್ರಜ್ವಲ್‌ ಪತ್ರಿಕಾಗೋಷ‍್ಠಿಯಲ್ಲಿದ್ದರು.









































































































error: Content is protected !!
Scroll to Top