ಬಾವಿ ಸಚ್ಛಗೊಳಿಸಲು ಇಳಿದ ವ್ಯಕ್ತಿ ಮೇಲಕ್ಕೆ ಬಾರಲಾರದೇ ಪರದಾಟ

ಅಗ್ನಿಶಾಮಕ ದಳ ಸಿಬ್ಬಂದಿಯಿಂದ ರಕ್ಷಣೆ

ಕಾರ್ಕಳ : ಬಾವಿ ಸ್ವಚ್ಛಗೊಳಿಸಲು ಇಳಿದ ವ್ಯಕ್ತಿ ಬಾವಿಯಿಂದ ಮೇಲೆ ಬರಲಾರದೇ ಪರದಾಡಿದ ಘಟನೆ ಎ. 16ರಂದು ನಗರದ ಬಂಡಿಮಠ ಬಳಿ ನಡೆದಿದೆ. ಗೋಪಿನಾಥ ಪುರಾಣಿಕ್ ಎಂಬವರಿಗೆ ಸೇರಿದ ಬಾವಿಯನ್ನು ಸ್ವಚ್ಛಗೊಳಿಸುವ ನಿಟ್ಟಿನಲ್ಲಿ ಪವನ್‌ ಪೂಜಾರಿ ಎಂಬ ಯುವಕ ಬಾವಿಗೆ ಇಳಿದಿದ್ದು, ಬಳಿಕ ಮೇಲಕ್ಕೆ ಬರಲಾಗದೇ ಸಮಸ್ಯೆಗೆ ಸಿಲುಕಿದರು. ತಕ್ಷಣವೇ ಅಲ್ಲಿದ್ದವರು ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದು, ದೌಡಾಯಿಸಿದ್ದು ಸಿಬ್ಬಂದಿ ಬಾವಿಗೆ ಬಿದ್ದ ವ್ಯಕ್ತಿಯನ್ನು ರಕ್ಷಿಸುವಲ್ಲಿ ಯಶಸ್ವಿಯಾದರು. ಕಾರ್ಯಾಚರಣೆಯಲ್ಲಿ ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ ಬಿ.ಎಂ. ಸಂಜೀವ್, ಸಿಬ್ಬಂದಿ ಹರಿಪ್ರಸಾದ್ ಶೆಟ್ಟಿಗಾರ್, ಜಯಮೂಲ್ಯ, ನಿತ್ಯಾನಂದ ಬಸವರಾಜ್, ಭೀಮಪ್ಪ ಪಾಲ್ಗೊಂಡಿದ್ದರು.

















































error: Content is protected !!
Scroll to Top