ಎಸ್‌ಡಿಪಿಐ ಕಾಂಗ್ರೆಸ್‌ನ ಅಘೋಷಿತ ಮುಖವಾಣಿ – ಸುನಿಲ್‌ ಕುಮಾರ್‌

ಎಸ್ಡಿಪಿಐ ವಿಚಾರದಲ್ಲಿ ಕಾಂಗ್ರೆಸ್‌ ಮೌನವೇಕೆ ?

ಬೆಂಗಳೂರು : ಎಸ್ಡಿಪಿಐ ಕಾಂಗ್ರೆಸ್ ನ ಅಘೋಷಿತ ಮುಖವಾಣಿಯಾಗಿದ್ದು, ಈ ಎರಡು ಪಕ್ಷಗಳ ನಡುವಿನ ಚುನಾವಣಾ ಮೈತ್ರಿ ಏನೆಂಬುದನ್ನು ಬಹಿರಂಗಗೊಳಿಸಬೇಕು ಎಂದು ಇಂಧನ, ಕನ್ನಡ ಮತ್ತು ಸಂಸ್ಕ್ರತಿ ಸಚಿವ ವಿ. ಸುನಿಲ್ ಕುಮಾರ್ ಒತ್ತಾಯಿಸಿದ್ದಾರೆ.
ಈ ಸಂಬಂಧ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಕಾಲದಿಂದಲೂ ಈ ಎರಡು ಪಕ್ಷಗಳ ನಡುವೆ ಕೊಡು ಕೊಳ್ಳುವಿಕೆ ನಡೆಯುತ್ತಿದೆ. ಪಿಎಫ್ಐ ಉಗ್ರರ ಮೇಲಿರುವ ಪ್ರಕರಣಗಳನ್ನು ಕೈ ಬಿಟ್ಟು ಅವರನ್ನು ಸಮಾಜದ ಮುಖ್ಯವಾಹಿನಿಗೆ ಸೇರಿಸಿ ಹಿಂದು ಕಾರ್ಯಕರ್ತರ ಹತ್ಯೆಗೆ ಕಾರಣರಾಗಿದ್ದರು. 2018 ರಿಂದ ಎಸ್ಡಿಪಿಐ ಮತ್ತು ಪಿಎಫ್ಐ ಜೊತೆಗೆ ಕಾಂಗ್ರೆಸ್ ನಡೆಸಿಕೊಂಡು ಬಂದ ಹೊಂದಾಣಿಕೆ ರಾಜಕಾರಣ ಇಂದಿಗೂ ಮುಂದುವರಿದಿದೆ ಎಂದು ಆರೋಪಿಸಿದ್ದಾರೆ.

ಪ್ರವೀಣ್‌ ಹತ್ಯೆ ಮಾಡಿರುವುದು ಎಸ್ಡಿಪಿಐ ಉಗ್ರರು
ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣದ ಹಿಂದಿರುವುದು ಇದೇ ಎಸ್ಡಿಪಿಐ ಉಗ್ರರು. ಆದರೆ, ಕಾಂಗ್ರೆಸ್ ಈ ಹತ್ಯೆ‌ ಹಿಂದಿರುವ ಶಕ್ತಿಗಳ ಬಗ್ಗೆ ಮಾತನಾಡಲಿಲ್ಲ. ಮಂಗಳೂರು ಕುಕ್ಕರ್ ಬ್ಲಾಸ್ಟ್ ಪ್ರಕರಣದಲ್ಲೂ ಇದೇ ಸಂಘಟನೆಯ ಹಸ್ತಕ್ಷೇಪವಿತ್ತು. ಆದರೆ, ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಆ ಘಟನೆಯನ್ನೇ ವ್ಯಂಗ್ಯವಾಡಿದ್ದರು. ಇದರಿಂದ ಕಾಂಗ್ರೆಸ್ ಹಾಗೂ ಎಸ್ಡಿಪಿಐ ಮಧ್ಯೆಯಿರುವ ಮಧುರ ಸಂಬಂಧ ಅರ್ಥವಾಗುತ್ತದೆ ಎಂದು ಟೀಕಿಸಿದ್ದಾರೆ.

ಎಸ್ಡಿಪಿಐ ವಿಚಾರದಲ್ಲಿ ಕಾಂಗ್ರೆಸ್‌ ಮೌನ
ಪಿಎಫ್ಐ ಅನ್ನು ಬ್ಯಾನ್ ಮಾಡುವ ಮೂಲಕ ಕೇಂದ್ರ ಸರಕಾರ ದೇಶದ ಆಂತರಿಕ ಭದ್ರತೆಗೆ ಧಕ್ಕೆಯುಂಟು ಮಾಡುತ್ತಿದ್ದ ಶಕ್ತಿಗಳನ್ನು ನಿಯಂತ್ರಿಸಿದೆ. ಆದರೆ, ಕಾಂಗ್ರೆಸ್ ಈ ವಿಚಾರದಲ್ಲೂ ರಾಜಕೀಯ ನಡೆಸಿತ್ತು ಎಂದು ಆರೋಪಿಸಿದರು. ಕೋಮುವಾದಿ ಶಕ್ತಿಗಳ ವಿರುದ್ಧ ಹೋರಾಟ ನಡೆಸುತ್ತೇವೆ ಎನ್ನುವ ಕಾಂಗ್ರೆಸ್ ಎಸ್ ಡಿಪಿಐ ವಿಚಾರದಲ್ಲಿ ಮಾತ್ರ ಮಾತನಾಡುವುದಿಲ್ಲ. ಅದೇ ರೀತಿ ಎಸ್ಡಿಪಿಐ ಕೂಡಾ ಕಾಂಗ್ರೆಸ್ ವಿರುದ್ಧ ಧ್ವನಿ ಎತ್ತುವುದಿಲ್ಲ. ಇದು ಒಳ ಒಪ್ಪಂದವಲ್ಲವೇ ? ಈ ಅನಧಿಕೃತ ಮೈತ್ರಿ ಬಗ್ಗೆ ನಿಮ್ಮ ಸ್ಪಷ್ಟನೆ ಬೇಕಾಗಿದೆ ಎಂದು ಸುನಿಲ್‌ ಆಗ್ರಹಿಸಿದರು.









































































































error: Content is protected !!
Scroll to Top