ಶಿರ್ಲಾಲು : ರಸ್ತೆ ದುರಸ್ತಿಗಿರುವ ತೊಡಕು ನಿವಾರಿಸುವಂತೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಬಗೆಹರಿಯದ ಸಮಸ್ಯೆ

ಕಾರ್ಕಳ : ಶಿರ್ಲಾಲು ಗ್ರಾಮದ ಮಂಗಳ ಬಾಕ್ಯಾರು ಬಳಿ ನಿರ್ಮಾಣವಾಗಿರುವ ಸೇತುವೆಯ ಇಕ್ಕೆಲಗಳಲ್ಲಿ ಮಣ್ಣು ಹಾಕಲು ಅಡ್ಡಿಪಡಿಸುತ್ತಿರುವವರ ವಿರುದ್ಧ ಅಧಿಕಾರಿಗಳಿಗೆ ದೂರು ನೀಡಿ ತೊಡಕು ನಿವಾರಿಸುವಂತೆ ಮನವಿ ಸಲ್ಲಿಸಿದ್ದರೂ ಅವರು ಸರಿಯಾದ ಸ್ಪಂದನೆ ನೀಡುತ್ತಿಲ್ಲ ಎಂದು ಗ್ರಾಮಸ್ಥರು ಅಸಮಧಾನ ವ್ಯಕ್ತಪಡಿಸಿದ್ದಾರೆ.

ಮಂಗಳ ಬಾಕ್ಯಾರು ಸರೋವರ ಫಾರ್ಮ್‌ ಬಳಿ ಅಜೆಕಾರು ಮತ್ತು ಶಿರ್ಲಾಲು ಗ್ರಾಮ ಸಂಪರ್ಕಿಸುವ ರಸ್ತೆಗೆ ಸರಕಾರದ ಅನುದಾನದಿಂದ ರೂ. 3.5 ಕೋಟಿ ವೆಚ್ಚದಲ್ಲಿ ಸೇತುವೆ ನಿರ್ಮಾಣಗೊಂಡಿದೆ. ಆದರೆ ಈ ಸೇತುವೆಯ ಇಕ್ಕೆಲಗಳಲ್ಲಿ ಮಣ್ಣು ಹಾಕಿ ಸೇತುವೆಯಿಂದ ರಸ್ತೆಗೆ ಸಂಪರ್ಕ ಕಲ್ಪಿಸಲು ಇದರ ಕಾಮಗಾರಿಯ ಇಂಜಿನಿಯರಿಗೆ ರಸ್ತೆಯ ಪಕ್ಕ ಜಾಗದಲ್ಲಿ ವಾಸವಿರುವ ಪಟ್ಟಾ ಸ್ಥಳದವರಾದ ಸರೋವರ ಫಾರ್ಮ್‌ನ ರಾಜು ಅಣ್ಣಯ್ಯ ಶೆಟ್ಟಿ ಅಡ್ಡಿಪಡಿಸುತ್ತಿದ್ದಾರೆ. ಅವರು ರಸ್ತೆಗೆ ಗೇಟು ಹಾಕಿದ್ದು ಇದರಿಂದಾಗಿ ಈ ರಸ್ತೆಯಲ್ಲಿ ಪ್ರಯಾಣ ಮಾಡುವಂತಹ ಶಾಲಾ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ತೊಂದರೆ ಉಂಟಾಗಿದೆ. ಮುಖ್ಯವಾಗಿ ಸಮೀಪದ ಅರಸುಬೈಲು ಮತ್ತು ಜಡ್ಡುಗ್ರಾಮದ ಜನರ ಸಂಚಾರಕ್ಕೆ ಅಡಚಣೆಯಾಗಿದ್ದು, ಗ್ರಾಮಸ್ಥರು ದೂರದ ರಸ್ತೆಯಲ್ಲಿ ಸುತ್ತುಬಳಸಿ ಸಂಚಾರ ಮಾಡುವಂತಾಗಿದೆ.

ಮನವಿಗೆ ಸ್ಪಂದಿಸದ ಅಧಿಕಾರಿಗಳು
ಈ ಸಮಸ್ಯೆಯನ್ನು ಪರಿಶೀಲಿಸಿ ನ್ಯಾಯ ಒದಗಿಸಿಕೊಡುವಂತೆ ಕಳೆದೆ ಮೂರು ತಿಂಗಳುಗಳಿಂದ ಶಿರ್ಲಾಲು ಗ್ರಾ. ಪಂ. ಅಧ್ಯಕ್ಷ, ಪಿಡಿಓ, ಗ್ರಾಮಕರಣಿಕ, ತಹಶೀಲ್ದಾರ್‌, ಜನಪ್ರತಿನಿಧಿಗಳು ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿ ಮನವಿ ಸಲ್ಲಿಸಿದ್ದರೂ ಈ ಕುರಿತು ಯಾರೂ ಸರಿಯಾದ ಸ್ಪಂದನೆ ನೀಡದಿರುವ ಬಗ್ಗೆ ಶಶಿಧರ್‌ ವಾಘ್ಲೆ ಸೇರಿದಂತೆ ಹಲವು ಮಂದಿ ಗ್ರಾಮಸ್ಥರು ಅಸಮಧಾನ ವ್ಯಕ್ತಪಡಿಸಿದ್ದಾರೆ.









































































































error: Content is protected !!
Scroll to Top