ಬಿಜೆಪಿಯ ಹಿರಿಯ ಶಾಸಕರಿಗೆ ಟಿಕೆಟ್​​ ಸಿಗೋದು ಡೌಟ್​​ : ಕ್ಷೇತ್ರ ತ್ಯಾಗ ಮಾಡುವಂತೆ ಹೈಕಮಾಂಡ್ ಕರೆ

ಬೆಂಗಳೂರು : ಈ ಬಾರಿಯ ಕರ್ನಾಟಕ ವಿಧಾನಸಭೆ ಚುನಾವಣೆಗೆ ಬಿಜೆಪಿಯ ಹಲವು ಹಿರಿಯ ಶಾಸಕರಿಗೆ ಟಿಕೆಟ್​​ ಸಿಗುವುದು ಬಹುತೇಕ ಅನುಮಾನ ಎಂದು ಉನ್ನತ ಮೂಲಗಳಿಂದ ಮಾಹಿತಿ ತಿಳಿದುಬಂದಿದೆ. ಅಲ್ಲದೆ, 5ಕ್ಕೂ ಹೆಚ್ಚು ಹಿರಿಯ ನಾಯಕರಿಗೆ ಕ್ಷೇತ್ರವನ್ನು ಬಿಟ್ಟುಕೊಡುವಂತೆ ದೂರವಾಣಿ ಕರೆ ಮೂಲಕ ಸೂಚನೆ ನೀಡಿದೆ ಎನ್ನಲಾಗುತ್ತಿದೆ. ತನಗೆ ದೂರವಾಣಿ ಕರೆ ಬಂದಿದ್ದು ನಿಜ, ಹೊಸಬರಿಗೆ ಅವಕಾಶ ನೀಡುವಂತೆ ಕೋರಿದ್ದಾರೆ ಎಂದು ಸ್ವತಃ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದ್ದಾರೆ.  ಇವರಲ್ಲದೆ, ಮಾಜಿ ಸಚಿವರಾದ ಎಸ್.ಸುರೇಶ್ ಕುಮಾರ್, ಆರ್.ಅಶೋಕ್, ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಗೆ ವರಿಷ್ಠರ ಸೂಚನೆ ನೀಡಲಾಗಿದೆ. ಮಾತ್ರವಲ್ಲದೆ, ಎಸ್.ಎ.ರಾಮದಾಸ್, ಬಿ.ಸಿ.ನಾಗೇಶ್​​ಗೂ ವರಿಷ್ಠರು ಸೂಚಿಸಿದ್ದಾರೆ ಎಂದು ಬಿಜೆಪಿ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

ನಿನ್ನೆಯವರೆಗೆ ನನಗೆ ಬಿಜೆಪಿ ಟಿಕೆಟ್​ ಖಚಿತ​ ಎಂದು ಹೇಳಿದ್ದರು. ಆದರೆ ಇಂದು ದೂರವಾಣಿ ಕರೆ ಮಾಡಿ ಹೊಸ ಮುಖಗಳಿಗೆ ಅವಕಾಶ ನೀಡಬೇಕು ಎಂದು ಕೋರಿದ್ದಾರೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದ್ದಾರೆ. ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು,  ನಾನು ಸ್ಪರ್ಧೆ ಮಾಡಬಾರದು ಅನ್ನೋದು ಇದ್ದಿದ್ದರೆ ಎರಡು ಮೂರು ತಿಂಗಳ ಹಿಂದೆ ನನಗೆ ಹೇಳಬೇಕಿತ್ತು ಇವತ್ತು ನನಗೆ ಹೇಳುತ್ತಾರೆ ಅಂದರೆ ಬಹಳ ಬೇಸರವಾಯಿತು. 30 ವರ್ಷ ಪಾರ್ಟಿ ಕಟ್ಟಿದವರಿಗೆ ಹೀಗೆ ಹೇಳಿದ್ದು ಬೇಜಾರಾಯ್ತು, ಹಿರಿಯ ನಾಯಕರಿಗೆ ಗೌರವ ಕೊಡೋ‌ ಕೆಲಸ ಆಗಬೇಕಿದೆ. ನನ್ನ ಮೇಲೆ ಭ್ರಷ್ಟಾಚಾರದ ಆರೋಪ ಇಲ್ಲ. ಪಕ್ಷದ ನಿಷ್ಟೆಗಾಗಿ ಕೆಲಸ ಮಾಡಿದ್ದೇನೆ. ಮಾಡುತ್ತೇವೆ ಎಂದಿದ್ದಾರೆ. ವರಿಷ್ಠರು ನನಗೆ ಅವಕಾಶ ಕೊಡುತ್ತಾರೆ ಅನ್ನೋ ವಿಶ್ವಾಸ ಇದೆ ಎಂದರು. ಈ ಬಾರಿಯ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡೇ ಮಾಡ್ತೇನೆ. ಈಗಾಗಲೇ ಕ್ಷೇತ್ರದಲ್ಲಿ ನಾನು ಚುನಾವಣೆ ಪ್ರಚಾರ ಮಾಡುತ್ತಿದ್ದೇನೆ. ನನಗೆ ಕ್ಷೇತ್ರದ ಜನರ ಅಶೀರ್ವಾದ ಇದೆ, ಹಾಗಾಗಿ ಸ್ಪರ್ಧಿಸುತ್ತೇನೆ ಎಂದು ಹೇಳಿದರು.

ಬಿಜೆಪಿಯ ಈ ಹಾಲಿ ಶಾಸಕರಿಗೆ ಟಿಕೆಟ್ ತಪ್ಪುವ ಸಾಧ್ಯತೆ

  • ನೆಹರು ಓಲೇಕಾರ್ – ಹಾವೇರಿ
  • ಎಸ್.ಎ. ರವೀಂದ್ರನಾಥ್- ದಾವಣಗೆರೆ ಉತ್ತರ
  • ಜಿ.ಹೆಚ್. ತಿಪ್ಪಾರೆಡ್ಡಿ- ಚಿತ್ರದುರ್ಗ
  • ಎಂ.ಪಿ. ಕುಮಾರಸ್ವಾಮಿ- ಮೂಡಿಗೆರೆ
  • ಬಿ.ಎಂ. ಸುಕುಮಾರ್ ಶೆಟ್ಟಿ- ಬೈಂದೂರು
  • ಹಾಲಾಡಿ ಶ್ರೀನಿವಾಸ ಶೆಟ್ಟಿ- ಕುಂದಾಪುರ
  • ವೆಂಕಟರೆಡ್ಡಿ ಮುದ್ನಾಳ್- ಯಾದಗಿರಿ
  • ಕಳಕಪ್ಪ ಬಂಡಿ- ರೋಣ
  • ಸೋಮಲಿಂಗಪ್ಪ- ಸಿರುಗುಪ್ಪ
  • ರಾಮಣ್ಣ ಲಮಾಣಿ- ಶಿರಹಟ್ಟಿ
  • ಸಂಜೀವ ಮಠಂದೂರು- ಪುತ್ತೂರು
  • ರಘುಪತಿ ಭಟ್‌ – ಉಡುಪಿ
  • ಲಾಲಾಜಿ ಮೆಂಡನ್- ಕಾಪು
  • ಸುನೀಲ್ ನಾಯ್ಕ್ – ಭಟ್ಕಳ
  • ಕೆ.ಎಸ್. ಈಶ್ವರಪ್ಪ – ಶಿವಮೊಗ್ಗ
  • ಎಸ್.ಎ. ರಾಮದಾಸ್ – ಕೃಷ್ಣರಾಜ
  • ಜಗದೀಶ್ ಶೆಟ್ಟರ್ – ಧಾರವಾಡ ಸೆಂಟ್ರಲ್
  • ವಿಶ್ವೇಶ್ವರ ಹೆಗಡೆ ಕಾಗೇರಿ – ಶಿರಸಿ
  • ಸುರೇಶ್ ಕುಮಾರ್ – ರಾಜಾಜಿನಗರ
  • ರಮೇಶ್​ ಜಾರಕಿಹೊಳಿ – ಗೋಕಾಕ್








































































































error: Content is protected !!
Scroll to Top