ಕಾರ್ಕಳ : ಪುರಸಭಾ ವ್ಯಾಪ್ತಿಯ ನೆಕ್ಲಾಜೆ ಕಾಳಿಕಾಂಬ ಐದು ಸೆಂಟ್ಸ್ ಪರಿಸರದಲ್ಲಿ ಕಳೆದ ನಾಲ್ಕು ದಿನಗಳಿಂದ ಚಿರತೆ ಹಾವಳಿ ಮಿತಿಮೀರಿದ್ದು ಸ್ಥಳೀಯರನ್ನು ಆತಂಕಕ್ಕೀಡು ಮಾಡಿದೆ. ಬುಧವಾರ ರಾತ್ರಿ ಎರಡು ಚಿರತೆಗಳು ನಾಯಿಯ ಭೇಟೆಗೆ ಪ್ರಯತ್ನಿಸಿದ್ದು ನಾಯಿಗಳು ಪ್ರಾಣಾಪಾಯದಿಂದ ತಪ್ಪಿಸಿಕೊಂಡಿದೆ. ಈ ಕುರಿತು ಪುರಸಭಾ ಮಾಜಿ ಸದಸ್ಯ ಪ್ರಕಾಶ್ ರಾವ್ ಹಾಗೂ ಸ್ಥಳೀಯರು ಕಾರ್ಕಳ ಅರಣ್ಯ ಇಲಾಖೆಗೆ ದೂರು ನೀಡಿದ್ದು, ಸ್ಪಂದಿಸಿದ ಇಲಾಖಾ ಸಿಬ್ಬಂದಿ ಚಿರತೆ ಹಿಡಿಯಲು ಬೋನ್‌ಗಳನ್ನು ಇರಿಸಿದ್ದಾರೆ. ಈ ಮೊದಲು ಕಾಡುಹಂದಿ, ಮಂಗಗಳು ಮತ್ತು ನವೀಲುಗಳ ಹಾವಳಿ ಅತಿಯಾಗಿದ್ದು, ಕೃಷಿ ಭೂಮಿಗೆ ತೊಂದರೆಯಾಗುತ್ತಿತ್ತು. ಆದರೆ ಇದೀಗ ಚಿರತೆ ಹಾವಳಿಯಿಂದಾಗಿ ಜಾನುವಾರು ಮತ್ತು ಜನರ ಪ್ರಾಣಕ್ಕೆ ಅಪಾಯ ಉಂಟಾಗಿದೆ ಎಂದು ಪ್ರಕಾಶ್ ರಾವ್ ಅಭಿಪ್ರಾಯಪಟ್ಟಿದ್ದಾರೆ.
ನೆಕ್ಲಾಜೆ ಕಾಳಿಕಾಂಬ ಪರಿಸರದಲ್ಲಿ ಚಿರತೆ ಹಾವಳಿ




















