ಆರೋಪಿಗಳ ಹಲ್ಲುಕಿತ್ತು ಹಾಕಿದ ಪೊಲೀಸ್‌ ಅಧಿಕಾರಿ

ಪುಂಡುಪೋಕರಿಗಳ ಹಲ್ಲುಗಳನ್ನು ಇಕ್ಕಳದಿಂದ ಕಿತ್ತು ಚಿತ್ರಹಿಂಸೆ ನೀಡಿದ ಆರೋಪ

ಚೆನ್ನೈ: ಪುಂಡು ಪೋಕರಿಗಳ ಹಲ್ಲು ಕಿತ್ತ ಹಾಕಬೇಕೆಂದು ಹೇಳುವುದೇನೋ ನಿಜ. ಆದರೆ ಅದರ ಅರ್ಥ ಅವರ ಸೊಕ್ಕು ಮುರಿಯಬೇಕೆಂದು. ಆದರೆ ತಮಿಳುನಾಡಿನ ಪೊಲೀಸ್‌ ಅಧಿಅಕರಿಯೊಬ್ಬರು ನಿಜವಾಗಿಯೂ ಆರೋಪಿಗಳ ಕಿತ್ತು ಹಾಕಿ ಈಗ ಸಮಸ್ಯೆಗೆ ಸಿಲುಕಿದ್ದಾರೆ. ಗುಂಪು ಘರ್ಷಣೆ ಸೇರಿದಂತೆ ಸಣ್ಣ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಗಳ ಹಲ್ಲುಗಳನ್ನು ಕಬ್ಬಿಣದ ಇಕ್ಕಳದಿಂದ ಕಿತ್ತು ಹಾಕಿ ಯುವ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿಯೊಬ್ಬರು ವಿಕೃತ ವರ್ತನೆ ತೋರುತ್ತಿದ್ದಾರೆ ಎಂದು ಗುಂಪೊಂದು ಆರೋಪಿಸಿದೆ.
ಪೊಲೀಸರ ಈ ಕ್ರಮದ ವಿರುದ್ಧ ತಮಿಳುನಾಡಿನ ನೇತಾಜಿ ಸುಭಾಷ್ ಸೇನಾ ಮತ್ತು ಪುರಟ್ಚಿ ಭಾರತಮ್ ಕಚ್ಚಿ ಸಂಘಟನೆಗಳು ತಿರುನಲ್ವೇಲಿ ಮತ್ತು ಅಂಬಾಸಮುದ್ರಂ ಪ್ರದೇಶಗಳಲ್ಲಿ ಬೃಹತ್ ಪ್ರತಿಭಟನೆಗಳನ್ನು ನಡೆಸಲು ನಿರ್ಧರಿಸಿವೆ.
ಅಂಬಾಸಮುದ್ರ ಯುವ ಐಪಿಎಸ್ ಅಧಿಕಾರಿ ಬಲದೇವ್ ಸಿಂಗ್ ವಿರುದ್ಧದ ಆರೋಪಗಳ ಬಗ್ಗೆ ಜಿಲ್ಲಾಧಿಕಾರಿ ಕಾರ್ತಿಕೇಯನ್ ಅವರು ತನಿಖೆಗೆ ಆದೇಶಿಸಿದ್ದಾರೆ. ಸಿಂಗ್‌ ಅವರು 2020ರ ಬ್ಯಾಚ್ ಐಪಿಎಸ್ ಅಧಿಕಾರಿ ಹಾಗೂ ಪ್ರತಿಷ್ಠಿತ ಬಾಂಬೆ ಐಐಟಿಯ ಹಳೆಯ ವಿದ್ಯಾರ್ಥಿ.
ಹತ್ತು ಯುವಕರನ್ನು ಗುಂಪು ಘರ್ಷಣೆ, ಸಾಲ ಮತ್ತು ಇತರ ಸಣ್ಣ ಅಪರಾಧಗಳ ವಿವಿಧ ಆರೋಪಗಳ ಮೇಲೆ ಇತ್ತೀಚೆಗೆ ಬಂಧಿಸಲಾಗಿತ್ತು. ಈ ಯುವಕರನ್ನು ಠಾಣೆಗೆ ಕರೆತಂದ ಬಳಿಕ ಸಿಂಗ್ ಅವರಿಗೆ ಚಿತ್ರಹಿಂಸೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಅಂಬಾಸಮುದ್ರದಲ್ಲಿ ಸಿಂಗ್‌ ಹಲವಾರು ಜನರ ಮೇಲೆ ಈ ರೀತಿ ಹಲ್ಲೆ ನಡೆಸಿದ್ದು, ಹಲ್ಲು ಕೀಳುವುದು ಆತನ ಪ್ರಮುಖ ಚಿತ್ರಹಿಂಸೆಯಾಗಿದೆ ಎಂದು ನೇತಾಜಿ ಸುಭಾಷ್ ಸೇನೆಯ ವಕೀಲ ಮಹಾರಾಜನ್ ತಿಳಿಸಿದ್ದಾರೆ. ಯುವಕ ಚೆಲ್ಲಪ್ಪ ಎಂಬವರು ಪೊಲೀಸ್‌ ಅಧಿಕಾರಿಯ ವಿಕೃತ ಹಿಂಸೆಯಿಂದ ಮೂರು ಹಲ್ಲುಗಳನ್ನು ಕಳೆದುಕೊಂಡಿದ್ದಾನೆ ಎಂದು ಅವರು ತಿಳಿಸಿದ್ದಾರೆ. ಅಂಬಾಸಮುದ್ರದಲ್ಲಿ ಸುಮಾರು 40 ಜನರ ಹಲ್ಲುಗಳನ್ನು ಸಿಂಗ್ ಈ ರೀತಿ ತೆಗೆದಿದ್ದು, ಅವರನ್ನು ಬಂಧಿಸಬೇಕು ಮತ್ತು ಸೇವೆಯಿಂದ ವಜಾಗೊಳಿಸಬೇಕೆಂದು ಒತ್ತಾಯಿಸಿದ್ದಾರೆ.









































































































error: Content is protected !!
Scroll to Top