ಉಡುಪಿ ರಿಕ್ಷಾ ಚಾಲಕ ಮಾಲಕರ ಸೌಹಾರ್ದ ಸಹಕಾರಿ ಸಂಘ ಗುಂಡಿಬೈಲ್‌ – ಕಾರ್ಕಳದ ಪ್ರಥಮ ಶಾಖೆಯ ಉದ್ಘಾಟನಾ ಸಮಾರಂಭ

ಕಾರ್ಕಳ : ತೆಳ್ಳಾರ್‌ ರಸ್ತೆ ಅನಂತಶಯನ ಕೃಷ್ಣ ಬಿಲ್ಡಿಂಗ್‌ನಲ್ಲಿ ನಿರ್ಮಾಣಗೊಂಡಿರುವ ಉಡುಪಿ ರಿಕ್ಷಾ ಚಾಲಕ ಮಾಲಕರ ಸೌಹಾರ್ದ ಸಹಕಾರಿ ಸಂಘ ಗುಂಡಿಬೈಲ್ ಇದರ ಕಾರ್ಕಳದ ಪ್ರಥಮ ಶಾಖೆಯ ಉದ್ಘಾಟನಾ ಸಮಾರಂಭವು ಮಾ. 23 ರಂದು ಜರುಗಿತು. ಆಟೋ ರಿಕ್ಷಾ ಚಾಲಕ ಮಾಲಕರ ಸಂಘದ ತಾಲೂಕು ಅಧ್ಯಕ್ಷ ಕೆ. ಬಾಲಕೃಷ್ಣ ಶೆಟ್ಟಿ ಉದ್ಘಾಟಿಸಿ ಶುಭಹಾರೈಸಿದರು. ಉಡುಪಿ ರಿಕ್ಷಾ ಚಾಲಕ ಮಾಲಕರ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಸುರೇಶ್ ಅಮೀನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಆಶಯ ವಿವಿದ್ಧೋದೇಶ ಸೌಹಾರ್ದ ಸಹಕಾರಿ ನಿಯಮಿತದ ಅಧ್ಯಕ್ಷ ಎಂ.ಕೆ. ಸುವ್ರತ್ ಕುಮಾರ್, ಬೆಂಗಳೂರು ಸಹಕಾರ ಸೌಹಾರ್ದದ ನಿರ್ದೇಶಕ ಎಸ್. ಮಂಜುನಾಥ್, ಸಹಕಾರ ಭಾರತಿ ಜಿಲ್ಲಾಧ್ಯಕ್ಷ ಬೋಳ ಸದಾಶಿವ ಶೆಟ್ಟಿ, ಸಹಕಾರಿ ಸಂಘಗಳ ಒಕ್ಕೂಟದ ಮುಖ್ಯ ಸಂಯೋಜಕ ಬಿ.ಎಸ್ .ವಿಜಯ್, ಕಟ್ಟಡ ಮಾಲಕ ಬೋಳ ನಾರಾಯಣ ಕಾಮತ್ ಉಪಸ್ಥಿತರಿದ್ದರು. ಸಂಘದ ಉಪಾಧ್ಯಕ್ಷ ಸಂತೋಷ್‌ ರಾವ್‌ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರುತಿ ಕಾರ್ಯಕ್ರಮ ನಿರೂಪಿಸಿದರು. ಪ್ರಕಾಶ್ ರಾವ್ ವಂದಿಸಿದರು.









































































































error: Content is protected !!
Scroll to Top