ನ್ಯೂಸ್ ಕಾರ್ಕಳ ಹೊರತಂದ ದೇವಸ್ಥಾನದ ಸಮಗ್ರ ಮಾಹಿತಿಯುಳ್ಳ ಹೊತ್ತಗೆ
ಕಾರ್ಕಳ : ಜನತೆಯ ನಾಡಿಮಿಡಿತ ಎಂಬ ಧ್ಯೇಯದೊಂದಿಗೆ ಕಳೆದ ಮೂರು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಸುದ್ದಿತಾಣ ನ್ಯೂಸ್ ಕಾರ್ಕಳ ಶ್ರೀ ಮಾರಿಯಮ್ಮ ಕ್ಷೇತ್ರದ ಪುನರ್ ನಿರ್ಮಾಣ ಮತ್ತು ಬ್ರಹ್ಮಕಲಶೋತ್ಸವದ ವಿಶೇಷ ಸಂಚಿಕೆ ಹೊರತಂದಿದ್ದು, ಮಾ. 14 ರಂದು ಸಚಿವ ವಿ. ಸುನೀಲ್ ಕುಮಾರ್ ಬಿಡುಗಡೆಗೊಳಿಸಿದರು.
ಮಾರಿಯಮ್ಮ ದೇವಸ್ಥಾನದ ಐತಿಹಾಸಿಕ ಹಿನ್ನೆಲೆ, ಕ್ಷೇತ್ರದ ನವೀಕರಣ ಕಾರ್ಯ, ಬ್ರಹ್ಮಕಲಶೋತ್ಸವದ ಕುರಿತಾದ ಸಂಪೂರ್ಣ ಮಾಹಿತಿಯನ್ನು ವರ್ಣರಂಜಿತ ಚಿತ್ರದೊಂದಿಗೆ ಪ್ರಕಟಿಸಿದ್ದು, ಮಂಗಳವಾರ ಪುಸ್ತಕ ಅನಾವರಣಗೊಳಿಸಲಾಯಿತು. ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷ ವಿಜಯ್ ಶೆಟ್ಟಿ, ಸದಸ್ಯರಾದ ಸುಜಯ್ ಕುಮಾರ್ ಶೆಟ್ಟಿ, ಜ್ಞಾನಸುಧಾ ವಿದ್ಯಾಸಂಸ್ಥೆಯ ಪಿಆರ್‌ಓ ಜ್ಯೋತಿ ಪದ್ಮನಾಭ ಭಂಡಿ, ಉಪನ್ಯಾಸಕರಾದ ಶೈಲೇಶ್ ಶೆಟ್ಟಿ, ಸಂತೋಷ್ ನೆಲ್ಲಿಕಾರ್, ನ್ಯೂಸ್ ಕಾರ್ಕಳ ವ್ಯವಸ್ಥಾಪಕ ಪದ್ಮಪ್ರಸಾದ್ ಜೈನ್, ಸಂಸ್ಥಾಪಕ ರಾಮಚಂದ್ರ ಬರೆಪ್ಪಾಡಿ, ವೃಷಭರಾಜ್ ಕಡಂಬ, ಸಲಹಾ ಸಮಿತಿ ಸದಸ್ಯರಾದ ಮೋಹನ್ ಕಾರ್ಕಳ, ಅರುಣ್ ಮಾಂಜ, ಕೆ.ಬಿ. ಕೀರ್ತನ್ ಕುಮಾರ್, ಸಂತೋಷ್ ನಾಯಕ್, ಜಾಹೀರಾತು ವಿಭಾಗದ ಮುಖ್ಯಸ್ಥೆ ಜ್ಯೋತಿ ರಮೇಶ್, ವರದಿಗಾರ್ತಿ ನಳಿನಿ ಎಸ್. ಸುವರ್ಣ, ಸುಮಿತ್ ಮುಂಡ್ಲಿ, ಪ್ರಸನ್ನ ಐಸಿರ ಉಪಸ್ಥಿತರಿದ್ದರು. ಪ್ರಭಾಕರ್ ಶೆಟ್ಟಿ ಕೊಂಡಳ್ಳಿ ಕಾರ್ಯಕ್ರಮ ನಿರ್ವಹಿಸಿದರು.



















