ಪರ್ಪಲೆಗಿರಿಯಲ್ಲಿ ಧಗಧಗಿಸಿದ ಬೆಂಕಿ : ವಾರದಲ್ಲಿ ಎರಡನೇ ಬಾರಿಗೆ ಅಗ್ನಿ ಅವಘಡ

ಕಾರ್ಕಳ : ಅತ್ತೂರು ಪರ್ಪಲೆಗಿರಿಯಲ್ಲಿ ಮಾ. 14 ರಂದು ಆಕಸ್ಮಿಕವಾಗಿ ಬೆಂಕಿ ಹತ್ತಿಕೊಂಡಿದ್ದು ಸುತ್ತಲಿನ ಗಿಡಮರಗಳು ಬೆಂಕಿಗೆ ಆಹುತಿಯಾಗಿದೆ. ಮಂಗಳವಾರ ಮಧ್ಯಾಹ್ನದ ವೇಳೆ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು, ಸ್ಥಳೀಯರು ಬೆಂಕಿ ನಂದಿಸಲು ಪ್ರಯತ್ನಿಸಿದ್ದಾಗ್ಯೂ ಬೆಂಕಿಯ ಜ್ವಾಲೆ ವಿಸ್ತರಿಸುತ್ತಲೇ ಹೋಗಿತ್ತು. ಮಾಹಿತಿ ತಿಳಿದ ಅಗ್ನಿಶಾಮಕ ದಳದವರು ಕೂಡಲೇ ಘಟನಾ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಠಾಣಾಧಿಕಾರಿ ಸಂಜೀವ, ಸಿಬ್ಬಂದಿ ಚಂದ್ರಶೇಖರ್‌ ಶೆಟ್ಟಿ, ಮನೋಹರ್‌ ಪ್ರಸಾದ್‌, ಉಮೇಶ್‌, ಸಂಜಯ್‌, ಮುಜಾ಼ಮಿಲ್‌ ಹಾಗೂ ಹಿಂದೂ ಜಾಗರಣ ವೇದಿಕೆಯ ರಮೇಶ್ ಕಲ್ಲೊಟ್ಟೆ, ನಿತಿನ್‌, ನಿಟ್ಟೆ ಗ್ರಾ. ಪಂ. ಅಧ್ಯಕ್ಷ ಸತೀಶ್‌ ಪೂಜಾರಿ, ಪಿಡಿಓ ಶೇಖರ್‌ ಮತ್ತು ಅರಣ್ಯ ಇಲಾಖಾ ಸಿಬ್ಬಂದಿ ಭಾಗಿಯಾಗಿದ್ದರು.

ಎರಡನೇ ಬಾರಿ ಬೆಂಕಿ
ಕಳೆದ ಎರಡು ದಿನಗಳ ಹಿಂದೆ ಇದೇ ಪರಿಸರದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಬಿಸಿಲಿನ ಬೇಗೆಗೆ ಪದೇ ಪದೇ ಬೆಂಕಿ ಹತ್ತಿಕೊಳ್ಳುತ್ತಿದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.









































































































error: Content is protected !!
Scroll to Top