ಉದ್ಯೋಗ ಜಾಲದ ವಂಚನೆಗೆ ಸಿಲುಕಿ ತೀರ್ಥಹಳ್ಳಿ ಯುವಕ ಕಾಂಬೋಡಿಯಾದಲ್ಲಿ ಬಂಧಿ

ವಾಪಸು ಕರೆತರಲು ಸರಕಾರದ ಪ್ರಯತ್ನ

ಬೆಂಗಳೂರು: ತೀರ್ಥಹಳ್ಳಿಯ ಸಾಫ್ಟ್‌ವೇರ್ ಇಂಜಿನಿಯರ್ ಕಿರಣ್ ಶೆಟ್ಟಿ ಎಂಬವರು ಕಾಂಬೋಡಿಯಾದಲ್ಲಿ ಖಾಸಗಿ ಸಂಸ್ಥೆಯೊಂದರಲ್ಲಿ ಸಿಕ್ಕಿಬಿದ್ದಿದ್ದು, ಅವರನ್ನು ಕರೆತರಲು ಸರಕಾರ ಪ್ರಯತ್ನ ನಿರತವಾಗಿದೆ. ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಸ್ವತಹ ಮುತುವರ್ಜಿ ವಹಿಸಿ ಕಿರಣ್‌ ಶೆಟ್ಟಿಯನ್ನು ವಾಪಸು ಕರೆತರುವ ಪ್ರಯತ್ನ ನಡೆಸಿದ್ದಾರೆ.
ವಿದೇಶದಲಿ ದೊಡ್ಡ ಸಂಬಳದ ಉದ್ಯೋಗದ ಆಮಿಷವೊಡ್ಡಿದ ಜಾಲಕ್ಕೆ ಸಿಲುಕಿ ಕಿರಣ್‌ ಶೆಟ್ಟಿ ಅಪಾಯದಲ್ಲಿದ್ದಾರೆ. ಅವರನ್ನು ಸುರಕ್ಷಿತವಾಗಿ ಕರೆತರುವ ಬಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಕೇಂದ್ರದ ವಿದೇಶಾಂಗ ಸಚಿವಾಲಯ ಅಧಿಕಾರಿಗಳ ಜತೆ ಮಾತುಕತೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಥೈಲ್ಯಾಂಡ್ ದೇಶದಲ್ಲಿ ಹೆಚ್ಚಿನ ಸಂಬಳ ಕೊಡಿಸುವ ಆಮಿಷ ಒಡ್ಡಿದ ನೇಮಕಾತಿ ಏಜೆನ್ಸಿಯಿಂದ ಮೊಸಹೋಗಿರುವ ಕಿರಣ್ ಶೆಟ್ಟಿ ಸದ್ಯ ಕಾಂಬೋಡಿಯಾದಲ್ಲಿ ಖಾಸಗಿ ಸಂಸ್ಥೆಯೊಂದರ ವಶದಲ್ಲಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಹಾಗೂ ವಿದೇಶಾಂಗ ರಾಜ್ಯ ಸಚಿವ ವಿ. ಮುರಳೀಧರನ್‌ ಅವರನ್ನು ಸಂಪರ್ಕಿಸಿ ಕಿರಣ್‌ ಶೆಟ್ಟಿಯನ್ನು ಭಾರತಕ್ಕೆ ಕರೆತರುವಂತೆ ಮನವಿ ಮಾಡಿದ್ದಾರೆ.
ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿಗಳ ಜತೆಗೂ ಟೆಕ್ಕಿಯ ಸುರಕ್ಷತೆ ಬಗ್ಗೆ, ಸಚಿವರು ಚರ್ಚಿಸಿದ್ದು, ಎಲ್ಲ ಪ್ರಯತ್ನ ಮಾಡಲಾಗುತ್ತಿದ್ದು, ಪೋಷಕರು ಧೈರ್ಯಗುಂದಬಾರದು ಎಂದು ಸಾಂತ್ವನ ಹೇಳಿದ್ದಾರೆ.
ಟೆಕ್ಕಿ ಕಿರಣ್ ಶೆಟ್ಟಿಯವರನ್ನು ದುಷ್ಕರ್ಮಿಗಳಿಂದ ಬಿಡಿಸಿ ಕೊಡುವಂತೆ, ಅವರ ಸಹೋದರ ಪವನ್ ಶೆಟ್ಟಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ಸಂಪರ್ಕಿಸಿ, ಮನವಿ ಮಾಡಿದ್ದರು. ಕಿರಣ್ ಶೆಟ್ಟಿ ಅವರಿಗೆ ನಾಲ್ಕು ತಿಂಗಳ ಮಗು ಹಾಗೂ ಪತ್ನಿಯಿದ್ದು ಅವರು ಆತಂಕದಿಂದ ಇದ್ದಾರೆ.









































































































error: Content is protected !!
Scroll to Top