ಕಾರ್ಕಳ : ಮೋಸದಿಂದ ಹಣ ಡಿಪಾಸಿಟ್ ಮಾಡಿಸಿಕೊಂಡು ವಂಚಿಸಿರುವುದಾಗಿ ಕಾರ್ಕಳದ ವ್ಯಕ್ತಿಯೋರ್ವರು ಸೈಬರ್ ಕ್ರೈಮ್ ಠಾಣೆಗೆ ದೂರು ನೀಡಿದ್ದಾರೆ. ಎಸ್.ಬಿ.ಐ. ಹಾಗೂ ಐ.ಸಿ.ಐ.ಸಿ ಬ್ಯಾಂಕ್ ಕಾರ್ಕಳ ಶಾಖೆಗಳಲ್ಲಿ ಎಸ್.ಬಿ ಖಾತೆಗಳನ್ನು ಹೊಂದಿರುವ ಅವರಿಗೆ ಫೇಸ್ ಬುಕ್ ನಲ್ಲಿ ಫೆಲಿಕ್ಸ್ ಡಯಾಸ್ ಎಂಬ ಹೆಸರಿನ ವ್ಯಕ್ತಿ ತಾನು ಯೂರೋಪಿನ ಸ್ರೈಪ್ರಸ್ ಎಂಬಲ್ಲಿ ವಾಸವಾಗಿದ್ದಾಗಿ ನಂಬಿಸಿ, ವ್ಯಾಲೆಂಟೈನ್ಸ್ ಡೇ ಗೆ ಗಿಫ್ಟ್ ಐಟಂಗಳ ಪಾರ್ಸೆಲ್ ಅನ್ನು ಕಳುಹಿಸುವುದಾಗಿ ತಿಳಿಸಿ ಅದರ ಫೊಟೋ ವನ್ನು ಹಾಗೂ ಮೆಸೇಜ್ ಗಳನ್ನು ವಾಟ್ಸಫ್ ಮುಖೇನ ಕಳುಹಿಸಿದ್ದರು. ಫೆ. 13ರಂದು ದೆಹಲಿ ಏರ್ ಫೋರ್ಟ್ ಸಿಬ್ಬಂದಿ ಎಂದು 9870189535 ನಂಬರಿನಿಂದ ಕರೆ ಮಾಡಿ ಪಾರ್ಸಲ್ ನ ಗ್ರೌಂಡ್ ಪಾಸ್ ಮಾಡಲು 47 ಸಾವಿರ ರೂ. ಡಿಪಾಸಿಟ್ ಮಾಡುವಂತೆ ತಿಳಿಸಿದ್ದರು. ಅದರಂತೆ ಅವರು ಹೇಳಿರುವ ಬ್ಯಾಂಕ್ ಖಾತೆಗೆ ತನ್ನ ಹೆಚ್.ಡಿ.ಎಫ್.ಸಿ. ಬ್ಯಾಂಕ್ ನಿಂದ ಹಣ ಡಿಪಾಸಿಟ್ ಮಾಡಿದ್ದು, ಅನಂತರ ಬೇರೆ ಬೇರೆ ರೀತಿಯಾಗಿ ಹೇಳಿ ಹಣ ಡಿಪಾಸಿಟ್ ಮಾಡುವಂತೆ ಕೇಳಿಕೊಂಡಿದ್ದು ಒಟ್ಟು 7,63,500 ರೂ. ಹಣವನ್ನು ಮೋಸದಿಂದ ಡಿಪಾಸಿಟ್ ಮಾಡಿಸಿಕೊಂಡಿರುವುದಾಗಿ ಅವರು ದೂರಿನಲ್ಲಿ ತಿಳಿಸಿದ್ದಾರೆ.
ಕಾರ್ಕಳ : ಫೇಸ್‌ಬುಕ್ ಪರಿಚಯ – ವ್ಯಾಲೆಂಟೈನ್ಸ್ ಡೇ ಗಿಪ್ಟ್ ಹೆಸರಿನಲ್ಲಿ ಲಕ್ಷಾಂತರ ಹಣ ವಂಚನೆ



















