ಕಾರ್ಕಳದಲ್ಲಿ ಆಪ್ಟಿಕಲ್ ಫೈಬರ್ ಪರ್ಫಾರ್ಮ್ ಉತ್ಪಾದನಾ ಘಟಕ ಸ್ಥಾಪನೆ – ಸುನೀಲ್‌ ಕುಮಾರ್‌

ಕಾರ್ಕಳ : ಕಾರ್ಕಳದಲ್ಲಿ ಆಪ್ಟಿಕಲ್ ಫೈಬರ್ ಪರ್ಫಾಮ್ ಉತ್ಪಾದನಾ ಘಟಕ ತೆರೆಯುವುದಕ್ಕೆ ಬಿರ್ಲಾ ಫುರುಕಾವ ಫೈಬರ್ ಆಪ್ಟಿಕ್ಸ್ ಪ್ರೈವೇಟ್ ಸಂಸ್ಥೆ ತಾತ್ವಿಕ ಒಪ್ಪಿಗೆ ನೀಡಿದ್ದು, ಈ ಸಂಬಂಧ ಸಂಸ್ಥೆ ಅಧಿಕಾರಿಗಳ ಜತೆಗೆ ಮಹತ್ವದ ಸಭೆ ನಡೆಸಲಾಗಿದೆ ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನಿಲ್ ಕುಮಾರ್ ತಿಳಿಸಿದ್ದಾರೆ.
ಸುಮಾರು 3000 ಕೋಟಿ ರೂ. ವೆಚ್ಚದಲ್ಲಿ ಘಟಕ ಸ್ಥಾಪನೆ ವಿಚಾರಕ್ಕೆ ಸಂಬಂಧಪಟ್ಟಂತೆ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಪಿಲ್ ಮೆಹ್ತಾ ಹಾಗೂ ಯುನಿವರ್ಸಲ್ ಕೇಬಲ್ ನ ಮುಖ್ಯಕಾರ್ಯನಿರ್ವಹಣಾಧಿಕಾರಿ ವೈ.ಎಸ್. ಲೋಧಾ ಜತೆ ಸುನೀಲ್‌ ಕುಮಾರ್‌ ಅವರು ಚರ್ಚೆ ನಡೆಸಿರುತ್ತಾರೆ.
ಯೋಜನೆಯಿಂದ ಸುಮಾರು 1500 ಮಂದಿಗೆ ಉದ್ಯೋಗ ದೊರೆಯಲಿದೆ. ಸರಕಾರದಿಂದ ಅನುಮತಿ ಪಡೆದ ಬಳಿಕ ಸುಮಾರು 3000 ಕೋಟಿ ರೂ. ಬಂಡವಾಳ ಹೂಡಿಕೆ ಮಾಡಲು ನಿರ್ಧರಿಸಲಾಗಿದೆ. ಮುಂದಿನ 15 ದಿನಗಳಲ್ಲಿ ಸ್ಥಳ ಪರಿಶೀಲನಾ ಕಾರ್ಯ ನಡೆಸಲು ಸಂಸ್ಥೆ ಒಪ್ಪಿಗೆ ನೀಡಿದ್ದು ಸಂಸ್ಥೆಯ ಅಧಿಕಾರಿಗಳ ತಂಡ ಸದ್ಯದಲ್ಲೇ ಕಾರ್ಕಳ ಆಗಮಿಸಲಿದೆ ಎಂದವರು ಮಾಹಿತಿ ನೀಡಿದರು.
ಟೆಲಿಕಮ್ಯನಿಕೇಷನ್ ತರಂಗಗಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ರವಾನಿಸಲು ಆಫ್ಟಿಕಲ್ ಫೈಬರ್ ಕೇಬಲ್ ಗಳಿಗೆ ಅಗತ್ಯವಾದ ಫರ್ಫಾರ್ಮಾ ಸೆಲಿಕಾ ಉತ್ಪಾದನೆಯನ್ನು ಈ ಘಟಕದಲ್ಲಿ ಮಾಡಲಾಗುತ್ತದೆ. 4ಜಿ ಮತ್ತು 5ಜಿ ಟೆಲಿ ಕಮ್ಯುನಿಕೇಷನ್ ಗಳಲ್ಲಿ ಇದು ಮೂಲಾಧಾರವಾಗಿದೆ. ಕಾರ್ಕಳದಲ್ಲಿ ಸುಮಾರು 1 ಲಕ್ಷ ಚದರಡಿ ಜಾಗದಲ್ಲಿ ಎರಡು ಹಂತದಲ್ಲಿ ಹೂಡಿಕೆ ಮಾಡಲಾಗುತ್ತದೆ ಎಂದು ಸಚಿವರು ತಿಳಿಸಿದರು.





























































































































error: Content is protected !!
Scroll to Top