ಕಾರ್ಕಳ : ಪಳ್ಳಿ ಮತ್ತು ನಿಂಜೂರು ಭಾಗದ ಕಾಂಗ್ರೆಸ್ ಕಾರ್ಯಕರ್ತರು ಜ. 21ರಂದು ವಿಕಾಸ ಕಚೇರಿಯಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು. ಸಚಿವ ವಿ. ಸುನೀಲ್ ಕುಮಾರ್ ಅವರು ಕೇಸರಿ ಶಾಲು ಹೊದಿಸಿ ಪಕ್ಷದ ಬಾವುಟ ನೀಡಿ ಅವರನ್ನು ಪಕ್ಷಕ್ಕೆ ಸ್ವಾಗತಿಸಿದರು. ಸಂತೋಷ್ ಶೆಟ್ಟಿ, ಜೆನೆಟ್ ಮಾರ್ಟಿಸ್, ದಿಲೀಪ್ ಪಟೇಲ್, ಗೋವಿಂದ ಜೋಗಿ, ಮನ್ಮಥ ಶೆಟ್ಟಿ ಮತ್ತು ಮಲ್ಲಿಕಾ ಬಿಜೆಪಿಗೆ ಸೇರ್ಪಡೆಗೊಂಡರು.
ದ. ಕ. ಜಿಲ್ಲಾ ಬಿಜೆಪಿ ವಕ್ತಾರ ಜಗದೀಶ ಶೇಣವ, ಕ್ಷೇತ್ರಾಧ್ಯಕ್ಷ ಮಹಾವೀರ ಹೆಗ್ಡೆ, ಉದ್ಯಮಿ ಬೋಳ ಶ್ರೀನಿವಾಸ ಕಾಮತ್, ಪ್ರಧಾನ ಕಾರ್ಯದರ್ಶಿ ಜಯರಾಮ ಸಾಲ್ಯಾನ್, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ರವೀಂದ್ರ ಕುಮಾರ್, ಜಿ.ಪಂ. ನಿಕಟಪೂರ್ವ ಸದಸ್ಯ ಸುಮಿತ್ ಶೆಟ್ಟಿ ಬೈಲೂರು, ಕಾರ್ಕಳ ತಾಲೂಕು ಬಿಜೆಪಿ ಉಪಾಧ್ಯಕ್ಷ ಅಂತೋನಿ ಡಿಸೋಜಾ, ಪಳ್ಳಿ ಗ್ರಾ. ಪಂ. ಸದಸ್ಯ ಶ್ರೀಕಾಂತ್ ಮೊದಲಾದವರು ಈ ಸಂದರ್ಭದಲ್ಲಿದ್ದರು.
ಪಳ್ಳಿ, ನಿಂಜೂರಿನ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಸೇರ್ಪಡೆ





















