ಜ. 22 : ಸಾಮೂಹಿಕ ಸ್ವಚ್ಛತಾ ಅಭಿಯಾನ – 24 ತಂಡಗಳ ಭಾಗಿ

ಕಾರ್ಕಳ : ಪರಶುರಾಮ ಥೀಮ್‌ ಪಾರ್ಕ್‌ ಲೋಕಾರ್ಪಣೆಯ ಅಂಗವಾಗಿ ಸ್ವರ್ಣ ಕಾರ್ಕಳ ಸ್ವಚ್ಛ ಕಾರ್ಕಳದ ಪರಿಕಲ್ಪನೆಯೊಂದಿಗೆ ಜ. 22 ರಂದು ಬೆಳಿಗ್ಗೆ 7 ಗಂಟೆಗೆ ಕಾರ್ಕಳದಿಂದ ಪರಶುರಾಮ ಥೀಮ್‌ ಪಾರ್ಕ್‌ ವರೆಗೆ ಸಾಮೂಹಿಕ ಸ್ವಚ್ಛತಾ ಅಭಿಯಾನ ಜರುಗಲಿದೆ.

24 ತಂಡಗಳ ಭಾಗಿ
ಕಾರ್ಕಳ, ಬೈಲೂರು ವ್ಯಾಪ್ತಿಯ ಶಾಲಾ- ಕಾಲೇಜುಗಳ ವಿದ್ಯಾರ್ಥಿಗಳು, ಎಲ್ಲಾ ಗ್ರಾಮ ಪಂಚಾಯತ್, ಪುರಸಭೆ ಹಾಗೂ ವಿವಿಧ ಸ್ವಯಂ ಸೇವಕರನ್ನೊಳಗೊಂಡ ಒಟ್ಟು 24 ತಂಡಗಳು ಭಾಗಿಯಾಗಲಿದ್ದು, ವಿವಿಧ ಸ್ಥಳಗಳಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಸ್ವಚ್ಛತೆಯಲ್ಲಿ 3000 ಸ್ವಯಂಸೇವಕರು ಪಾಲ್ಗೊಳ್ಳಲಿದ್ದು, ಫಲಹಾರದ ವ್ಯವಸ್ಥೆಯನ್ನು ಮಾಡಲಾಗಿದೆ.

















































error: Content is protected !!
Scroll to Top