ಕಾರ್ಕಳ : ಜೆಸಿಐ ರೂರಲ್‌ನ 2023 ನೇ ಸಾಲಿನ ನೂತನ ಪದಾಧಿಕಾರಿಗಳ ಪದಪ್ರದಾನ ಸಮಾರಂಭ ಜ. 11 ರಂದು ಸಂಜೆ 7 ಗಂಟೆಗೆ ಸ್ವಾಗತ್ ಹೊಟೇಲ್‌ನ ಸಭಾಂಗಣದಲ್ಲಿ ಜರುಗಲಿದೆ.
ಅಧ್ಯಕ್ಷರಾಗಿ ಮಂಜುನಾಥ್ ಕೋಟ್ಯಾನ್, ಕಾರ್ಯದರ್ಶಿಯಾಗಿ ಹರಿಣಿ ಜೆ. ಬಂಗೇರ ಆಯ್ಕೆ
ಡಿ. 20 ರಂದು ಹೋಟೆಲ್ ಸ್ವಾಗತ್ ಸಭಾಂಗಣದಲ್ಲಿ ನಡೆದ ವಿಶೇಷ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆದಿದ್ದು, ನೂತನ ಅಧ್ಯಕ್ಷರಾಗಿ ಮಂಜುನಾಥ್ ಕೋಟ್ಯಾನ್ ಹಾಗೂ ಕಾರ್ಯದರ್ಶಿಯಾಗಿ ಹರಿಣಿ. ಜೆ. ಬಂಗೇರ ಆಯ್ಕೆಯಾಗಿದ್ದಾರೆ. ಮಂಜುನಾಥ್ ಕೋಟ್ಯಾನ್ ಅವರು ಸೂರಾಲು ಗಣೇಶೋತ್ಸವ ಸಮಿತಿಯ ಕಾರ್ಯದರ್ಶಿಯಾಗಿ ಹಾಗೂ ಕಾರ್ಕಳ ಯುವವಾಹಿನಿ ಘಟಕದ ಜತೆ ಕಾರ್ಯದರ್ಶಿಯಾಗಿ ಹಾಗೂ ಮತ್ತಿತರ ಸಂಘ ಸಂಸ್ಥೆಗಳಲ್ಲಿ ಗುರುತಿಸಿಕೊಂಡಿದ್ದಾರೆ. ಹರಿಣಿ. ಜೆ. ಬಂಗೇರ ಕಾರ್ಕಳ ಟಿ.ಎ.ಪಿ.ಸಿ.ಎಂ.ಎಸ್.ಲಿಮಿಟೆಡ್‌ನ ಉದ್ಯೋಗಿಯಾಗಿದ್ದಾರೆ.
ನೂತನ ಪದಾಧಿಕಾರಿಗಳು
ಜತೆ ಕಾರ್ಯದರ್ಶಿ – ಮಮತಾ ಸಂತೋಷ್
ಕೋಶಾಧಿಕಾರಿ – ಸಂತೋಷ್ ಬಂಗೇರ ಮಿಯ್ಯಾರು
ಲೇಡಿ ಜೇಸಿ – ರಶ್ಮಿ ಮಂಜುನಾಥ್ ಕೋಟ್ಯಾನ್
ಜ್ಯೂನಿಯರ್ ಜೇಸಿ – ಪ್ರಜ್ಞಾನ
ಉಪಾಧ್ಯಕ್ಷರು – ತಾರಾನಾಥ್ ಕೋಟ್ಯಾನ್, ಅರುಣ್ ಮಾಂಜ, ಸಕೀರ್ತೀ ಶೆಟ್ಟಿ, ಲತಾ ಪ್ರಕಾಶ್, ಸಂಗೀತಾ ರತ್ನಾಕರ್
ಘಟಕ ಪತ್ರಿಕೆ ಸಂಪಾದಕರು – ಸಮೃದ್ಧಿ
ನಿರ್ದೆಶಕರು – ಸಂತೋಷ್ ಹೆಗ್ಡೆ, ಓಂಕಾರ್ ಪಾಟೀಲ್, ಪ್ರಶಾಂತ್ ಬಜಗೋಳಿ, ಕವಿತಾ ತಾರಾನಾಥ್, ರಾಕೇಶ್ ಅಮೀನ್, ಸುಶ್ಮಿತಾ

























