ಕಣಂಜಾರು : ಬೋನಿಗೆ ಬಿದ್ದ ಚಿರತೆ

ಕಾರ್ಕಳ : ಕಣಂಜಾರು ಪರಿಸರದಲ್ಲಿ ಓಡಾಡುತ್ತಿದ್ದ ಚಿರತೆಯನ್ನು ಸೆರೆಹಿಡಿಯುವಲ್ಲಿ ಕಾರ್ಕಳ ಅರಣ್ಯ ಇಲಾಖೆ ಯಶಸ್ವಿಯಾಗಿದೆ. ಪರಿಸರದಲ್ಲಿ ಚಿರತೆಯ ಹಾವಳಿ ಹೆಚ್ಚಾಗುತ್ತಿದೆ ಎಂದು ಸ್ಥಳೀಯರು ದೂರು ನೀಡಿದ ಮೇರೆಗೆ ಅರಣ್ಯ ಇಲಾಖೆ ಕಣಂಜಾರು ಅರಣ್ಯ ಪ್ರದೇಶದಲ್ಲಿ ಒಂದು ವಾರದ ಹಿಂದೆ ಬೋನು ಇರಿಸಿದ್ದರು. ಜ. 10ರ ಮುಂಜಾನೆ ಚಿರತೆ ಆ ಬೋನಿಗೆ ಬಿದ್ದಿದ್ದು ಗ್ರಾಮಸ್ಥರು ನಿಟ್ಟಿಸಿರು ಬಿಡುವಂತಾಗಿದೆ. ನಂತರ ಚಿರತೆಯನ್ನು ಪಿಲಿಕುಳ ವನ್ಯಜೀವಿ ಸಂರಕ್ಷಣಾ ಕೇಂದ್ರಕ್ಕೆ ಬಿಡಲಾಯಿತು. ಈ ಕಾರ್ಯಾಚರಣೆಯಲ್ಲಿ ಕಾರ್ಕಳ ವಲಯ ಅರಣ್ಯಾಧಿಕಾರಿ ಪ್ರಭಾಕರ್‌ ಕುಲಾಲ್‌, ಉಪ ವಲಯ ಅರಣ್ಯಾಧಿಕಾರಿ ಪ್ರಕಾಶ್‌ ಚಂದ್ರ, ಜಯರಾಮ್‌, ರಾಘವೇಂದ್ರ ಶೆಟ್ಟಿ, ಅರಣ್ಯ ರಕ್ಷಕರಾದ ಶ್ರೀಧರ್‌ ಹಾಗೂ ಮಹಂತೇಶ್‌ ಗೋಡಿ, ಅರಣ್ಯ ವೀಕ್ಷಕರಾದ ಬಾಬು ಹಾಗೂ ಶಮೀನ್ ಭಾಗವಹಿಸಿದ್ದರು.

















































error: Content is protected !!
Scroll to Top