ಹೊಸವರ್ಷ ಆಚರಿಸುತ್ತಿದ್ದ 89 ಸೈನಿಕರನ್ನು ಕೊಂದದ್ದಕ್ಕೆ ಪ್ರತೀಕಾರ ಎಂದ ರಷ್ಯಾ
ಮಾಸ್ಕೊ : ಕಳೆದ 10 ತಿಂಗಳಿನಿಂದ ನಡೆಯುತ್ತಿರುವ ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧ ಇನ್ನಷ್ಟು ಭೀಕರವಾಗಿದೆ. ಕಿರು ಕದನ ವಿರಾಮದ ಬಳಿಕ ಭಾನುವಾರದಿಂದ ಉಭಯ ದೇಶಗಳ ನಡುವೆ ಮತ್ತೆ ಯುದ್ಧ ಆರಂಭವಾಗಿದೆ. ಪೂರ್ವ ಉಕ್ರೇನ್‌ನಲ್ಲಿ ಉಕ್ರೇನ್ ಪಡೆಗಳು ತಾತ್ಕಾಲಿಕವಾಗಿ ನೆಲೆಸಿರುವ ಎರಡು ಕಟ್ಟಡಗಳ ಮೇಲೆ ಬೃಹತ್ ರಾಕೆಟ್ ದಾಳಿಯಲ್ಲಿ 600ಕ್ಕೂ ಹೆಚ್ಚು ಉಕ್ರೇನಿಯನ್ ಸೈನಿಕರು ಸಾವನ್ನಪ್ಪಿದ್ದಾರೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ತಿಳಿಸಿದೆ.
ಈ ವರ್ಷದ ಆರಂಭದಲ್ಲಿ ಕನಿಷ್ಠ 89 ರಷ್ಯಾದ ಸೈನಿಕರನ್ನು ಕೊಂದ ಉಕ್ರೇನ್ ನಡೆಸಿದ ದಾಳಿಗೆ ಪ್ರತೀಕಾರವಾಗಿ ಕ್ರಾಮಾಟೋರ್ಸ್ಕ್‌ನಲ್ಲಿನ ಕಟ್ಟಡಗಳ ಮೇಲಿನ ದಾಳಿಯಾಗಿದೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ಹೇಳಿದೆ.
ಉಕ್ರೇನ್ ಪಡೆಗಳನ್ನು ಗುರಿಯಾಗಿಸಲು ವಿಶ್ವಾಸಾರ್ಹ ಗುಪ್ತಚರರನ್ನು ಬಳಸಿದೆ ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ಒಂದು ಹಾಸ್ಟೆಲ್‌ನಲ್ಲಿ 700 ಕ್ಕೂ ಹೆಚ್ಚು ಉಕ್ರೇನಿಯನ್ ಸೈನಿಕರು ಮತ್ತು ಇನ್ನೊಂದರಲ್ಲಿ 600ಕ್ಕೂ ಹೆಚ್ಚು ಸೈನಿಕರು ಇದ್ದಾರೆ ಎಂದು ಅದು ಹೇಳಿದೆ.
ರಷ್ಯಾದ ಏಕಪಕ್ಷೀಯ ಕದನ ವಿರಾಮ ಭಾನುವಾರ ಬೆಳಗ್ಗೆ ಮುಕ್ತಾಯಗೊಂಡಿದೆ. ಈ ದಾಳಿಗಳಲ್ಲಿ ಆರು ನೂರಕ್ಕೂ ಹೆಚ್ಚು ಉಕ್ರೇನಿಯನ್ ಸೈನಿಕರನ್ನು ಕೊಂದಿರುವುದಾಗಿ ರಷ್ಯಾ ಹೇಳಿಕೊಂಡಿದೆ, ಆದರೆ ಉಕ್ರೇನ್ ಈ ಕುರಿತು ಏನೂ ಹೇಳಿಲ್ಲ. ದಾಳಿಯಲ್ಲಿ 600ಕ್ಕೂ ಹೆಚ್ಚು ಯೋಧರು ಮೃತಪಟ್ಟಿದ್ದಾರೆ, ಇದರೊಂದಿಗೆ ಕಳೆದ ವಾರ ಡೊನೆಟ್ಸ್ಕ್‌ನ ಮಕಿವ್ಕಾದಲ್ಲಿ ತನ್ನ 89 ಸೈನಿಕರನ್ನು ಕೊಂದಿದ್ದಕ್ಕಾಗಿ ಪ್ರತೀಕಾರ ತೀರಿಸಿಕೊಂಡಿರುವುದಾಗಿ ಎಂದು ರಷ್ಯಾ ಹೇಳಿದೆ. ಜ.1ರ ರಾತ್ರಿ, ಹೊಸ ವರ್ಷವನ್ನು ಆಚರಿಸುತ್ತಿದ್ದ ರಷ್ಯಾದ ಸೈನಿಕರ ಮೇಲೆ ಉಕ್ರೇನ್ ಸೇನೆ ರಾಕೆಟ್ ದಾಳಿ ನಡೆಸಿತ್ತು.




















