ಕಾರ್ಕಳ : ಕೆದಿಂಜೆ ಬಿಎಸ್‌ಕೆ ಗೇರು ಫ್ಯಾಕ್ಟರಿ ಮುಂಭಾಗದಲ್ಲಿ ಬೈಕ್ ಕಾರು ನಡುವೆ ಅಪಘಾತ ಉಂಟಾಗಿ ಸವಾರ ಗಾಯಗೊಂಡ ಘಟನೆ ಜ. 9 ರ ಬೆಳಿಗ್ಗೆ ಸಂಭವಿಸಿದೆ. ನಿಟ್ಟೆಯಿಂದ ಬೆಳ್ಮಣ್ ಕಡೆಗೆ ಸಾಗುತ್ತಿದ್ದ ಬೈಕ್‌ಗೆ ಬೆಳ್ಮಣ್‌ನಿಂದ ಕಾರ್ಕಳ ಕಡೆಗೆ ಬರುತ್ತಿದ್ದ ಕಾರು ಡಿಕ್ಕಿ ಹೊಡೆದಿರುವ ಪರಿಣಾಮವಾಗಿ ಸವಾರನ ಕಾಲಿಗೆ ಗಾಯವಾಗಿದ್ದು, ಪ್ರಥಮ ಚಿಕಿತ್ಸೆಯನ್ನು ಕೊಡಿಸಲಾಗಿದೆ. ಈ ಅಪಘಾತದಿಂದ ಯಾವುದೇ ಪ್ರಾಣಾಪಾಯವಿಲ್ಲವೆಂದು ಸ್ಥಳೀಯರಿಂದ ತಿಳಿದು ಬಂದಿದೆ.
ಕೆದಿಂಜೆ : ಬೈಕ್ ಕಾರು ಅಪಘಾತ – ಸವಾರನಿಗೆ ಗಾಯ




















