ಯುನಿಟಸ್ -2023 : ಅಂತರ ಕಾಲೇಜು ಸಾಂಸ್ಕೃತಿಕ ಹಾಗೂ ಮ್ಯಾನೇಜ್‌ಮೆಂಟ್ ಸ್ಪರ್ಧೆ

ಕ್ರೈಸ್ಟ್‌ಕಿಂಗ್‌ ವಿದ್ಯಾಸಂಸ್ಥೆಗೆ ದ್ವಿತೀಯ ಸಮಗ್ರ ಚಾಂಪಿಯನ್‌ಶಿಪ್‌

ಕಾರ್ಕಳ: ನಾರಾವಿಯ ಸೈಂಟ್ ಅ್ಯಂಟನಿ ಪ್ರಥಮ ದರ್ಜೆ ವಾಣಿಜ್ಯ ಕಾಲೇಜಿನಲ್ಲಿ ನಡೆದ ರಾಜ್ಯಮಟ್ಟದ ಯುನಿಟಸ್ 2023 ಅಂತರ ಕಾಲೇಜು ಸಾಂಸ್ಕೃತಿಕ ಹಾಗೂ ಮ್ಯಾನೇಜ್‌ಮೆಂಟ್ ಸ್ಪರ್ಧೆಗಳಲ್ಲಿ ಕ್ರೈಸ್ಟ್‌ಕಿಂಗ್ ಪದವಿ ಪೂರ್ವ ಕಾಲೇಜು ದ್ವಿತೀಯ ಸಮಗ್ರ ಚಾಂಪಿಯನ್ ಶಿಪ್ ಪಡೆದುಕೊಂಡಿತು. ರಸಪ್ರಶ್ನೆ ಸ್ಪರ್ಧೆಯಲ್ಲಿ ದ್ವಿತೀಯ ವಿಜ್ಞಾನ ವಿಭಾಗದ ವಿಷ್ಣುಪ್ರಸಾದ್ ಹಾಗೂ ಪ್ರಥಮ ವಿಜ್ಞಾನ ವಿಭಾಗದ ಸ್ವಸ್ತಿಕ್ ಭಂಡಾರಿ ಪ್ರಥಮ ಸ್ಥಾನ. ಅಣಕು ಪ್ರೆಸ್ ಸ್ಪರ್ಧೆಯಲ್ಲಿ ಪ್ರಥಮ ವಾಣಿಜ್ಯ ವಿಭಾಗದ ವಿಹಾನ್ ದ್ವಿತೀಯ ಸ್ಥಾನ, ಸಮೂಹ ಗೀತೆಯಲ್ಲಿ ಪ್ರಥಮ ವಾಣಿಜ್ಯ ವಿಭಾಗದ ಅನಿಷಾ ಶೆಟ್ಟಿ, ಪ್ರಥಮ ವಿಜ್ಞಾನ ವಿಭಾಗದ ಫ್ಲಾವಿಯನ್, ಲವಿಶಾ, ಪ್ರಿನ್ಸಿಯಾ, ಕೆಲ್ವಿನ್, ಯಶ್ ದ್ವಿತೀಯ ಸ್ಥಾನ. ಉತ್ಪನ್ನಗಳ ಜಾಹೀರಾತು ಸ್ಪರ್ಧೆಯಲ್ಲಿ ಪ್ರಥಮ ವಾಣಿಜ್ಯ ವಿಭಾಗದ ಪ್ರಥೀತ್, ವಿವೇಕ್, ರಿಯಾ, ಎವಿಟಾ, ರಿತಿಕ್, ರಿಶಾನ್ ದ್ವಿತೀಯ ಸ್ಥಾನ ಪಡೆಯುವ ಮೂಲಕ ಸಂಸ್ಥೆ ಸಮಗ್ರ ಚಾಂಪಿಯನ್ ಶಿಪ್‌ನಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿತು. ಸಂಸ್ಥೆಯ ವಾಣಿಜ್ಯಶಾಸ್ತ್ರ ಉಪನ್ಯಾಸಕಿ ಸರಿತಾ ರೀನಾ ಡಿ’ಸೋಜ ತಂಡದ ತರಬೇತಿಯ ನೀಡಿದ್ದರು.





























































































































error: Content is protected !!
Scroll to Top