ಜ. 8 : ಉಚಿತ ವೈದ್ಯಕೀಯ ತಪಾಸಣಾ ಶಿಬಿರ

ಕಾರ್ಕಳ : ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ತಾಲೂಕು ಶಾಖೆ ಹಾಗೂ ತಾಲೂಕಿನ ವಿವಿಧ ಇಲಾಖೆಗಳ ವೃಂದ ಸಂಘಗಳ ಜಂಟಿ ಆಶ್ರಯದಲ್ಲಿ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ತಜ್ಞ ವೈದ್ಯರ ತಂಡ ಮತ್ತು ಆರೋಗ್ಯ ಇಲಾಖೆಯ ಸಹಕಾರದೊಂದಿಗೆ ಕಾರ್ಕಳ ತಾಲೂಕಿನ ಸರಕಾರಿ ನೌಕರರು ಮತ್ತು ಅವರ ಅವಲಂಬಿತರಿಗಾಗಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಜ. 8 ರಂದು 9:30 ರಿಂದ 1 ಗಂಟೆಯವರೆಗೆ ಬಂಡಿಮಠ ಸರಕಾರಿ ನೌಕರರ ಭವನದಲ್ಲಿ ನಡೆಯಲಿದೆ.

ವೈದ್ಯಕೀಯ ತಪಾಸಣೆಯ ವಿಭಾಗಗಳು
ಜನರಲ್ ಮೆಡಿಸಿನ್, ಹೃದ್ರೋಗ ವಿಭಾಗ, ಸ್ತ್ರೀ ರೋಗ (ಒಬಿಜಿ), ಚರ್ಮರೋಗ, ರಕ್ತದೊತ್ತಡ, ಮಧುಮೇಹ, ಅಗತ್ಯ ಇದ್ದಲ್ಲಿ ಇಸಿಜಿ ಪರೀಕ್ಷೆಯನ್ನು ಸ್ಥಳದಲ್ಲಿ ಉಚಿತವಾಗಿ ಮಾಡಲಾಗುವುದು. ಸರಕಾರಿ ನೌಕರರು ಅವಲಂಬಿತರ ಜೊತೆಗೆ ಇಲಾಖಾ ಗುರುತಿನ ಚೀಟಿಯೊಂದಿಗೆ ಹಾಜರಾಗುವುದು. ಈ ಹಿಂದಿನ ವೈದ್ಯಕೀಯ ದಾಖಲೆಗಳು ಇದ್ದಲ್ಲಿ ತರುವುದು.

ಈ ಸೌಲಭ್ಯವನ್ನು ನಿಗಮ ಮಂಡಳಿ, ಸರಕಾರಿ ಇಲಾಖೆಯ ಗುತ್ತಿಗೆ ನೌಕರರು ಮತ್ತು ನಿವೃತ್ತ ಸರಕಾರಿ ನೌಕರರು ಪಡೆದುಕೊಳ್ಳಬಹುದು. ಮಾಹಿತಿಗಾಗಿ 9901474897 (ಬಾಲಕೃಷ್ಣ ಎನ್.‌ ) 9449991735 (ಉಮೇಶ್‌ ಕೆ. ಎಸ್‌.) 9449510200 (ರಾಜರಾಮ ಶೇರ್ವೇಗಾರ್) 9632589560 (ವಿನೋದ್‌) ನಂಬರಿಗೆ ಸಂಪರ್ಕಿಸಬಹುದು ಎಂದು ಆಯೋಜಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

















































error: Content is protected !!
Scroll to Top