300 ಕೋ.ರೂ. ಮಾದಕ ವಸ್ತು ಸಹಿತ ಪಾಕ್‌ ದೋಣಿ ವಶ

ಕರಾವಳಿ ಕಾವಲು ಪಡೆಯಿಂದ 10 ಮಂದಿಯ ಬಂಧನ

ಅಹ್ಮದಾಬಾದ್‌ : ಗುಜರಾತ್ ಕರಾವಳಿಯಲ್ಲಿ ಪಾಕಿಸ್ಥಾನದ ದೋಣಿಯೊಂದನ್ನು ಭಾರತೀಯ ಕರಾವಳಿ ಕಾವಲು ಪಡೆ ವಶಕ್ಕೆ ಪಡೆದಿದೆ. ದೋಣಿಯಲ್ಲಿದ್ದ ಮಂದಿಯನ್ನು, ಶಸ್ತ್ರಾಸ್ತ್ರಗಳು ಹಾಗೂ ಬರೋಬ್ಬರಿ 300 ಕೋಟಿ ರೂಪಾಯಿ ಮೌಲ್ಯದ ಮಾದಕ ವಸ್ತು ವಶಪಡಿಸಿಕೊಳ್ಳಲಾಗಿದೆ. ಮದ್ದುಗುಂಡುಗಳು ಮತ್ತು 40 ಕೆಜಿ ಮಾದಕ ವಸ್ತುಗಳನ್ನು ಸಾಗಿಸುತ್ತಿದ್ದ ಪಾಕಿಸ್ಥಾನದ ದೋಣಿಯನ್ನು ಗುಜರಾತ್ ಕರಾವಳಿಯಲ್ಲಿ ತಡೆಹಿಡಿಯಲಾಗಿದೆ ಎಂದು ಭಾರತೀಯ ಕರಾವಳಿ ಕಾವಲು ಪಡೆ ತಿಳಿಸಿದೆ. ಇದರಲ್ಲಿದ್ದ 10 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ.
ಮುಂಜಾನೆ ವೇಳೆ ಪಾಕಿಸ್ಥಾನದ ಮೀನುಗಾರಿಕಾ ದೋಣಿ ‘ಅಲ್ ಸೊಹೆಲಿ’ ಭಾರತದ ಪರಿಧಿಯಲ್ಲಿ ಅನುಮಾನಾಸ್ಪದವಾಗಿ ಚಲಿಸುತ್ತಿರುವುದನ್ನು ನೌಕೆ ಗಮನಿಸಿದೆ. ಭಾರತೀಯ ಕರಾವಳಿ ಕಾವಲು ಪಡೆಯ ಹಡಗಿನ ಗಮನಕ್ಕೆ ಬಂದ ತಕ್ಷಣ, ಪಾಕ್‌ ದೋಣಿ ತಪ್ಪಿಸಿಕೊಳ್ಳಲು ಪ್ರಾರಂಭಿಸಿತು. ಎಚ್ಚರಿಕೆ ನೀಡಿದ ನಂತರವೂ ಅದು ನಿಲ್ಲಲಿಲ್ಲ.
ಕೋಸ್ಟ್ ಗಾರ್ಡ್ ಸಿಬ್ಬಂದಿಯು ಅಂತಿಮವಾಗಿ ದೋಣಿಯನ್ನು ತಡೆದು ನಿಲ್ಲಿಸುವಲ್ಲಿ ಯಶಸ್ವಿಯಾದರು. ದೋಣಿಯಲ್ಲಿ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ಸುಮಾರು 300 ಕೋಟಿ ಮೌಲ್ಯದ ಸುಮಾರು 40 ಕೆಜಿ ಮಾದಕ ವಸ್ತು ಪತ್ತೆಯಾಗಿದೆ.





























































































































error: Content is protected !!
Scroll to Top