ಮಾಳ : ಸಂಜೀವಿನಿ ಒಕ್ಕೂಟಗಳ ಸದಸ್ಯರಿಗೆ ನರ್ಸರಿ ನಿರ್ಮಾಣ ತರಬೇತಿ

ನರ್ಸರಿ ಅಭಿವೃದ್ಧಿಯು ಒಂದು ಜೀವನೋಪಾಯ ಚಟುವಟಿಕೆ- ಗುರುದತ್ ಎಂ.ಎನ್

ಮಾಳ : ನರ್ಸರಿ ಅಭಿವೃದ್ಧಿಯು ಒಂದು ಜೀವನೋಪಾಯ ಚಟುವಟಿಕೆ ಆಗಿದ್ದು, ಸಂಜೀವಿನಿ ಒಕ್ಕೂಟಗಳ ಸದಸ್ಯರಿಗೆ ಆರ್ಥಿಕವಾಗಿ ಸ್ವಾವಲಂಬನೆಗೆ ಸಹಕಾರಿ ಆಗಲಿದೆ. ಇದನ್ನು ಅರಿತು ಒಕ್ಕೂಟದ ಸದಸ್ಯರು ಜವಾಬ್ದಾರಿವಹಿಸಿಕೊಂಡು, ಉತ್ಸಾಹದಿಂದ ನರ್ಸರಿಯ ಕೆಲಸ ಕಾರ್ಯಗಳಲ್ಲಿ ತೊಡಗಿಕೊಳ್ಳಬೇಕು ಎಂದು ಗುರುದತ್ ಎಂ.ಎನ್ ಹೇಳಿದರು. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಹಾಗೂ ಸಾಮಾಜಿಕ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಅ.21 ರಂದು ಮಾಳ, ಕೇಂದ್ರೀಯ ಸಸ್ಯಕ್ಷೇತ್ರ ಕೂಡಿಗೆಯಲ್ಲಿ ನಡೆದ ನರ್ಸರಿ ನಿರ್ಮಾಣ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾರ್ಕಳ ತಾ. ಪಂ.ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗುರುದತ್ ಎಂ.ಎನ್ ಮಾತನಾಡಿ, ನರ್ಸರಿ ಅಭಿವೃದ್ಧಿಯಲ್ಲಿ ಒಕ್ಕೂಟದ ಸದಸ್ಯರು ಉತ್ಸಾಹದಿಂದ ತೊಡಗಿಕೊಳ್ಳಬೇಕು ಎಂದು ಸದಸ್ಯರ ಜವಬ್ದಾರಿಯ ಬಗ್ಗೆ ತಿಳಿಸಿದರು. ಉತ್ತಮ ರೀತಿಯಲ್ಲಿ ಸಸಿಗಳನ್ನು ಪೋಷಿಸಿದಾಗ ಮಾತ್ರ ಉತ್ತಮವಾಗಿ ಸಸಿ ಬೆಳೆಯಲು ಸಾಧ್ಯ, ಸಸಿಗಳ ನಿರ್ವಹಣೆಯ ಕುರಿತು ಮಾಹಿತಿ ಅವಶ್ಯಕತೆ ಇದ್ದಲ್ಲಿ ಸಾಮಾಜಿಕ ವಲಯ ಅರಣ್ಯ ಇಲಾಖೆಯಿಂದ ಪಡೆದುಕೊಳ್ಳಬಹುದು ಎಂದು ತಿಳಿಸಿದರು. ನರೇಗಾ ಯೋಜನೆಯಡಿ ಸಿಗುವ ಅನುದಾನ ಮತ್ತು ಸಂಜೀವಿನಿ ಒಕ್ಕೂಟವು ನೀಡುವ ಬಂಡವಾಳದೊಂದಿಗೆ ನರ್ಸರಿ ಅಭಿವೃದ್ಧಿಗೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಂಡು ಸಸಿ ಬೆಳೆಸಿ, ನಿಗದಿ ಪಡಿಸಿದ ದರದಂತೆ ಅರ್ಹರಿಗೆ ಮಾರಾಟ ಮಾಡಿ ಒಕ್ಕೂಟಗಳು ಆರ್ಥಿಕ ಸ್ವಾವಲಂಬನೆ ಪಡೆದುಕೊಳ್ಳುವ ಬಗ್ಗೆ ಮಾಹಿತಿ ನೀಡಿದರು.
ಸಾಮಾಜಿಕ ವಲಯ ಅರಣ್ಯಾಧಿಕಾರಿ ವಾರಿಜಾಕ್ಷಿ ತರಬೇತಿಯನ್ನುದ್ದೇಶಿಸಿ ಮಾತನಾಡಿ, ಸಂಜೀವಿನಿ ಒಕ್ಕೂಟದ ಸದಸ್ಯರು ತಮ್ಮ ತಮ್ಮ ಮನೆಯ ಕೆಲಸದಂತೆ ನರ್ಸರಿ ನಿರ್ಮಾಣದ ಪ್ರತೀ ಹಂತದಲ್ಲಿ ಆಸಕ್ತಿ ವಹಿಸಿ ಕೆಲಸ ನಿರ್ವಹಿಸಬೇಕು. ಉತ್ತಮ ಗುಣಮಟ್ಟದ ಬೀಜಗಳ ಸಂಗ್ರಹಣೆ ಮತ್ತು ಸಸ್ಯಗಳ ಪೋಷಣೆಯ ಬಗ್ಗೆ ಹಾಗೂ ಅವುಗಳಿಗೆ ಕೆಂಪು ಮಣ್ಣು, ಮರಳು, ಹಟ್ಟಿ ಗೊಬ್ಬರಗಳನ್ನು ಯಾವ ಪ್ರಮಾಣದಲ್ಲಿ ಹಾಕಬೇಕು ಎಂಬುದರ ಕುರಿತು ಪ್ರಾಯೋಗಿಕವಾಗಿ ಮಾಹಿತಿ ನೀಡಿದರು.
ಸನ್ಮಾನ:
ಸಾಮಾಜಿಕ ಕ್ಷೇತ್ರದಲ್ಲಿ ಅರಣ್ಯ ನಿರ್ಮಾಣದ ನಿಸ್ವಾರ್ಥ ಸೇವೆಯನ್ನು ಗುರುತಿಸಿ ತಾಲೂಕು ಪಂಚಾಯಿತಿ ವತಿಯಿಂದ ವಲಯ ಅರಣ್ಯಾಧಿಕಾರಿ ವಾರಿಜಾಕ್ಷಿ ಮತ್ತು ಸಿಬ್ಬಂದಿ ವರ್ಗದವರಾದ ಪುಟ್ಟಣ್ಣ ಗೌಡ ಮತ್ತು ಗೋಪಾಲ ಇವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ನಿಟ್ಟೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶೇಖರ್ ಶೆಟ್ಟಿ, ಮರ್ಣೆ, ನಿಟ್ಟೆ, ಸಾಣೂರು, ನಲ್ಲೂರು ಗ್ರಾಮ ಪಂಚಾಯತ್ ಮಟ್ಟದ ಸಂಜೀವಿನಿ ಒಕ್ಕೂಟದ ಸದಸ್ಯರುಗಳು ಉಪಸ್ಠತಿರಿದ್ದರು. ನರೇಗಾ ಯೋಜನೆಯ ಸಹಾಯಕ ನಿರ್ದೇಶಕರು (ಪ್ರ) ಮಧು.ಎಂ.ಸಿ ಕಾರ್ಯಕ್ರಮವನ್ನು ನಿರ್ವಹಿಸಿದರು.

Latest Articles

error: Content is protected !!