ಕೆಲಸ ಮಾಡದ ಪೊಲೀಸರನ್ನೇ ಲಾಕಪ್‌ಗೆ ತಳ್ಳಿದ ಎಸ್‌ಪಿ!

ಪಾಟ್ನಾ: ಅಧಿಕಾರಿಯ ಕಾರ್ಯವೈಖರಿ ಬಗ್ಗೆ ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಬಿಹಾರದ ನವಾಡ ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಪೊಲೀಸ್ ಸಿಬ್ಬಂದಿ ನಿರೀಕ್ಷೆಯಂತೆ ಕೆಲಸ ಮಾಡುತ್ತಿಲ್ಲ ಎನ್ನುವ ಕಾರಣಕ್ಕೆ ಎಸ್‌ಪಿ ಐವರು ಅಧೀನ ಪೊಲೀಸ್ ಸಿಬ್ಬಂದಿಯನ್ನು ಲಾಕಪ್​ಗೆ ಹಾಕಿಬೀಗ ಜಡಿದ ಘಟನೆ ಬಿಹಾರದಲ್ಲಿ ಸಂಭವಿಸಿದೆ.
ಪೊಲೀಸರು ಲಾಕಪ್​ನಲ್ಲಿರುವ ವೀಡಿಯೊ ವೈರಲ್ ಆಗಿದೆ. ಬಿಹಾರದ ಪೊಲೀಸ್ ಸಿಬ್ಬಂದಿಯ ಸಂಘ ಬಿಹಾರ ಪೊಲೀಸ್ ಒಕ್ಕೂಟ ಘಟನೆಯ ಬಗ್ಗೆ ವಿಸ್ತೃತ ತನಿಖೆ ನಡೆಯಬೇಕೆಂದು ಆಗ್ರಹಿಸಿದೆ.
ಸಬ್​-ಇನ್​ಸ್ಪೆಕ್ಟರ್​ಗಳಾದ ಶತ್ರುಘ್ನ ಪಾಸ್ವಾನ್ ಮತ್ತು ರಾಮ್​ರೇಖಾ ಸಿಂಗ್, ಎಎಸ್​ಐಗಳಾದ ಸಂತೋಷ್ ಪಾಸ್ವಾನ್, ಸಂಜಯ್ ಸಿಂಗ್ ಮತ್ತು ರಾಮೇಶ್ವರ್ ಉರೌನ್ ಅವರನ್ನು ಮೇಲಧಿಕಾರಿ ಲಾಕಪ್‌ಗೆ ತಳ್ಳಿ ದ್ದಾರೆ. ಸುಮಾರು ಎರಡು ತಾಸು ಅವರು ಲಾಕಪ್‌ನೊಳಗೆ ಬಂಧಿಯಾಗಿದ್ದರು.
ಕೆಲವು ಪ್ರಕರಣಗಳನ್ನು ಪರಿಶೀಲಿಸಲೆಂದು ಸೆ.8ರಂದು ಎಸ್​ಪಿ ಸ್ಥಳಕ್ಕೆ ಬಂದಾಗ ಈ ವೇಳೆ ಕೆಲ ಅಧಿಕಾರಿಗಳು ಕರ್ತವ್ಯ ನಿರ್ವಹಣೆಯಲ್ಲಿ ಲೋಪ ಎಸಗಿರುವುದು ಪತ್ತೆಯಾಗಿತ್ತು. ಇದರಿಂದ ಕೋಪಗೊಂಡು ತಪ್ಪು ಮಾಡಿದವರನ್ನು ಲಾಕಪ್​ನಲ್ಲಿ ಇರಿಸುವಂತೆ ಹೇಳಿದರು. ಆದರೆ ಇವರ ಕರ್ತವ್ಯಲೋಪ ಅಥವಾ ತಪ್ಪು ಏನು ಎಂದು ಮೂಲಗಳು ಹೇಳಿಲ್ಲ. ಈ ಬಗ್ಗೆ ಎಸ್​ಪಿ ಸಹ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಪೊಲೀಸರನ್ನು ಲಾಕಪ್​ಗೆ ಹಾಕಿರುವ ಯಾವುದೇ ವಿಡಿಯೊ ಬಹಿರಂಗಗೊಂಡಿಲ್ಲ’ ಎಂದು ಎಸ್​ಪಿ ಹೇಳಿದ್ದರು. ಆದರೆ ಅವರು ಹೇಳಿಕೆ ನೀಡಿದ ಮಾರನೇ ದಿನವೇ ವಾಟ್ಸಾಪ್​ ಗ್ರೂಪ್​ಗಳಲ್ಲಿ ಸಿಸಿಟಿವಿ ವೀಡಿಯೊ ತುಣುಕು ಹರಿದಾಡಲು ಆರಂಭಿಸಿದೆ.









































































































error: Content is protected !!
Scroll to Top