gaming app ವಂಚನೆ ಜಾಲ: 17 ಕೋ.ರೂ.ವಶ

ಕೋಲ್ಕತ್ತಾ: ಮೊಬೈಲ್ ಗೇಮಿಂಗ್ ಅಪ್ಲಿಕೇಶನ್ ಮೂಲಕ ವಂಚನೆ ಜಾಲದ ಮೂಲ ಪತ್ತೆ ಹಚ್ಚಲು ಜಾರಿ ನಿರ್ದೇಶನಾಲಯ ಕೋಲ್ಕತ್ತಾದ ಆರು ಸ್ಥಳಗಳಿಗೆ ದಾಳಿ ಮಾಡಿ 17 ಕೋ.ರೂ.ವಶಪಡಿಸಿಕೊಂಡಿದೆ. ಬ್ಯಾಂಕ್ ಅಧಿಕಾರಿಗಳೊಂದಿಗೆ ಶನಿವಾರ ಕೋಲ್ಕತ್ತಾದ ಗಾರ್ಡನ್ ರೀಚ್ ಪ್ರದೇಶದಲ್ಲಿರುವ ಉದ್ಯಮಿ ಅಮೀರ್ ಖಾನ್ ಮನೆ ಮೇಲೆ ದಾಳಿ ನಡೆಸಿ 17 ಕೋಟಿ ರೂಪಾಯಿ ನಗದು ಮತ್ತು ಆಸ್ತಿ ದಾಖಲೆಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ವಶಪಡಿಸಿಕೊಂಡಿರುವ ಹಣದ ನಿಖರವಾದ ಮೊತ್ತವನ್ನು ಖಚಿತಪಡಿಸಿಕೊಳ್ಳಲು ನಗದು ಎಣಿಕೆ ಯಂತ್ರಗಳನ್ನು ತರಲಾಗಿದೆ. ಉದ್ಯಮಿಯ ನಿವಾಸದ ಮೇಲೆ ಇಡಿ ದಾಳಿ ನಡೆದಿರುವ ಹಿನ್ನೆಲೆಯಲ್ಲಿ ಕೇಂದ್ರ ಪಡೆಗಳನ್ನು ಸ್ಥಳದಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ. E-Nuggets ಎಂಬ ಮೊಬೈಲ್ ಗೇಮಿಂಗ್ ಆಪ್ ಬಳಕೆದಾರರಿಗೆ ವಂಚಿಸಿದ ಆರೋಪದ ಮೇಲೆ ಆರೋಪಿ ಅಮೀರ್ ಖಾನ್ ಮತ್ತು ಇತರರ ವಿರುದ್ಧ ಫೆಡರಲ್ ಬ್ಯಾಂಕ್ ಅಧಿಕಾರಿಗಳು ನೀಡಿದ ದೂರಿನ ಮೇರೆಗೆ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.









































































































error: Content is protected !!
Scroll to Top