ಕಾರ್ಕಳ: ಆಷಾಢ ಮಾಸ ಎಂದರೆ ಶೂನ್ಯ ಮಾಸ. ಈ ಮಾಸದಲ್ಲಿ ಶುಭ ಕೆಲಸಗಳಿಗೆ ಅವಕಾಶವಿರುವುದಿಲ್ಲ, ಆದರೆ ವಿಪರೀತ ಸುರಿಯುವ ಮಳೆಯ ನೀರಿನಲ್ಲಿ ರೈತ ಇಡೀ ದಿನ ನಿಂತು ವ್ಯವಸಾಯ ಮಾಡುತ್ತಿದ್ದ ಆ ಕಾಲವನ್ನು ನಾವು ಸ್ಮರಿಸಬೇಕು. ಅವನಿಲ್ಲದೆ ನಮ್ಮ ಬಾಳಿಲ್ಲ ಮುಂದಿನ ಪೀಳಿಗೆಗೆ ಇದನ್ನು ಪರಿಚಯಿಸುವ ಪ್ರಯತ್ನ ಮಾಡುಬೇಕು. ಎಂದು ಕಾರಿಂಜೇಶ್ವರ ಕ್ಷೇತ್ರದ ಜ್ಯೋತಿಷಿ ಸುಬ್ರಮಣ್ಯ ಭಟ್ ತಿಳಿಸಿದರು. ಹಿರಿಯಂಗಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಮತ್ತು ಕ್ಷತ್ರೀಯ ಮರಾಠ ಸಮಾಜ ಜಂಟಿ ಆಶ್ರಯದಲ್ಲಿ ನಡೆದ ಆಷಾಡ ಮಾಸದ ವಿಶೇಷತೆಯ ಬಗ್ಗೆ ಉಪನ್ಯಾಸ ನೀಡಿ ಗುರುವಂದನೆ ಸ್ವೀಕರಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ ದೇವಸ್ಥಾನದ ಆಡಳಿತ ಮೊಕ್ತೇಸರ ಗಿರೀಶ್ ರಾವ್ ಸಮಾಜ ಬಂಧುಗಳ ವಿಳಾಸ ಕೈಪಿಡಿಯನ್ನು ಬಿಡುಗಡೆಗೊಳಿಸಿದರು. ಕೆಸರು ಗದ್ದೆಯಲ್ಲಿ ವಿವಿಧ ಸರ್ಧೆಗಳನ್ನು ಏರ್ಪಡಿಸಿ ಬಹುಮಾನಗಳನ್ನು ವಿತರಿಸಲಾಯಿತು.ಮನೆಗಳಲ್ಲಿ ತಯಾರಿಸಿದ ಆಷಾಢ ಮಾಸದ 40 ಬಗೆಯ ಖಾದ್ಯಗಳನ್ನು ಉಣಬಡಿಸಲಾಯಿತು. ಸಮಾಜದ ಹಿರಿಯರಾದ ವಾಸೋಜಿ ರಾವ್ ವೀಡೆ, ಸತ್ಯರ್ಥಿ ರಾವ್, ಲಕ್ಷ್ಮಣ್ ರಾವ್, ಸೇವಾ ಸಮಿತಿ ಸಂಚಾಲಕ ಗುರು ಪ್ರಸಾದ್, ಟ್ರಸ್ಟ್ ಗೌರವಾದ್ಯಕ್ಷ ಗುಣಪ್ರಕಾಶ್, ಉದ್ಯಮಿ ಸಂತೋಷ್ ರಾವ್ ಮಸ್ಕತ್ ಮೊದಲಾದವರು ಉಪಸ್ಥಿತರಿದ್ದರು. ಅಧ್ಯಕ್ಷ ಶುಭದ ರಾವ್ ಪ್ರಸ್ತಾವಿಕ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿದರು, ಹರೇಂದ್ರ ರಾವ್ ನಿರೂಪಿಸಿ ಪ್ರಸನ್ನರಾವ್ ಧನ್ಯವಾದವಿತ್ತರು.
ಆಷಾಢವೆಂದರೆ ಶೂನ್ಯ ಮಾಸ: ಜ್ಯೋತಿಷಿ ಸುಬ್ರಹ್ಮಣ್ಯ ಭಟ್





















