ಕಾರ್ಕಳ : ಕಾರ್ಗಿಲ್ ವಿಜಯ್ ದಿವಸ್ ಪ್ರಯುಕ್ತ ಮಾಜಿ ಸೈನಿಕರ ವೇದಿಕೆ ಮೂಡಬಿದ್ರೆ – ಕಾರ್ಕಳ, ಸ್ವಚ್ಛ ಕಾರ್ಕಳ ಬ್ರಿಗೇಡ್, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಕಳ ನೇತೃತ್ವದಲ್ಲಿ ಆನೆಕೆರೆಯ ಅಮರ್ ಜವಾನ್ ಪಾರ್ಕ್‌ನಲ್ಲಿ ಕಾರ್ಗಿಲ್ ಯುದ್ಧದಲ್ಲಿ ಮಡಿದ ವೀರಯೋಧರಿಗೆ ಮಂಗಳವಾರ ನಮನ ಸಲ್ಲಿಸಲಾಯಿತು. ಮಾಜಿ ಸೈನಿಕ ಗಿಲ್ಬರ್ಟ್ ಬ್ರಿಗಾಂಝಾ ಮಾತನಾಡಿ, ಯುವಪೀಳಿಗೆ ಅಗ್ನಿಪಥ್ ಯೋಜನೆ ಸದುಪಯೋಗಪಡಿಸಿಕೊಳ್ಳಬೇಕು. ಸೈನಿಕನ ಜೀವನವನ್ನೊಮ್ಮೆ ನೋಡಬೇಕು ಮತ್ತು ಸೈನಿಕ ಶಿಸ್ತನ್ನು ಮಕ್ಕಳು ಕಲಿಯಬೇಕೆಂದರು.
ಸ್ವಚ್ಛ ಕಾರ್ಕಳ ಬ್ರಿಗೇಡ್‌ನ ಪ್ರಕಾಶ್ ರಾವ್ ಮಾತನಾಡಿ, ಸ್ವಾತಂತ್ರ್ಯದ ಅಮೃತಮಹೋತ್ಸವದ ಸಲುವಾಗಿ ಆ. 13 ರಿಂದ 15ರವರೆಗೆ ನಡೆಯಲಿರುವ ಹರ್ ಘರ್ ತಿರಂಗಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪ್ರತಿ ಮನೆಯಲ್ಲಿ ತಿರಂಗ ಹಾರಾಡುವಂತಾಗಬೇಕೆಂದರು. ಮಾಜಿ ಸೈನಿಕರ ವೇದಿಕೆ ಅಧ್ಯಕ್ಷ ದೊಂಬಯ್ಯ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸೈನಿಕರಾದ ನವನಂದ ಸ್ವಾಗತಿಸಿ, ನಿರೂಪಿಸಿದರು. ಹಿರಿಯಣ್ಣ ಸುವರ್ಣ ವಂದಿಸಿದರು. ಮಾಜಿ ಸೈನಿಕರ ವೇದಿಕೆಯ ಸದಸ್ಯರು, ಅ.ಭಾ.ವಿ. ಪರಿಷತ್ ಕಾರ್ಯಕರ್ತರು, ಸ್ವಚ್ಛ ಕಾರ್ಕಳ ಬ್ರಿಗೇಡ್‌ನ ಸದಸ್ಯರು ಮತ್ತು ಸ್ಥಳೀಯರು ಉಪಸ್ಥಿತರಿದ್ದರು. ಕಾರ್ಯಕ್ರಮದ ಬಳಿಕ ಮಾಜಿ ಸೈನಿಕ ಸಂಕಪ್ಪ ಪೂಜಾರಿ ಅವರ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಲಾಯಿತು.
ಆನೆಕೆರೆ ಅಮರ್ ಜವಾನ್ ಪಾರ್ಕ್‌ನಲ್ಲಿ ಕಾರ್ಗಿಲ್ ವಿಜಯ್ ದಿವಸ್ ಆಚರಣೆ
Recent Comments
ಕಗ್ಗದ ಸಂದೇಶ
on