ಉಡುಪಿ : ಮಹಿಳೆಯೋರ್ವರ ಬಟ್ಟೆ ಎಳೆದಿರುವ ಆರೋಪದ ಮೇರೆಗೆ ಅಜೆಕಾರಿನ ಮೂಲದ ಖಲೀಲ್ ಎಂಬವನ ವಿರುದ್ಧ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಜು. 26ರಂದು ದೂರು ದಾಖಲಾಗಿದೆ. ಜು. 24ರಂದು ಮಧ್ಯಾಹ್ನ 2 ಗಂಟೆಗೆ ಉಡುಪಿ ತಾಲೂಕಿನ ಆಶಾ ಎಂಬವರ ಮನೆಯ ಅಂಗಳಕ್ಕೆ ಬಂದ ಖಲೀಲ್ ಆಕೆಯಲ್ಲಿ ಮಗ ದೀರಜ್ ಇದ್ದಾನೆಯೇ ಎಂದು ವಿಚಾರಿಸಿದ್ದು, ಆ ಸಮಯ ಆಶಾ ಮನೆಯಿಂದ ಹೊರಗೆ ಬಂದಾಗ ಅವರ ಮೊಬೈಲ್ ಸಂಖ್ಯೆಯನ್ನು ಕೇಳಿರುತ್ತಾನೆ. ನೀನಗೇಕೆ ಮೊಬೈಲ್ ಸಂಖ್ಯೆ ಎಂದು ಕೇಳಿದಾಗ, ಅವನು ಬಟ್ಟೆಯನ್ನು ಎಳೆದಿರುತ್ತಾನೆ. ಈ ವೇಳೆ ಬೊಬ್ಬೆ ಹಾಕಿದಾಗ ನೆರೆಮನೆಯ ಅವರ ತಮ್ಮ ಉದಯ ಬಂದಿರುತ್ತಾರೆ. ಆತನನ್ನು ನೋಡಿ ನೀನು ಈ ವಿಷಯವನ್ನು ಯಾರಿಗಾದರೂ ತಿಳಿಸಿದರೆ ನಿನ್ನನ್ನು ಬಿಡುವುದಿಲ್ಲ ಎಂಬುದಾಗಿ ಜೀವ ಬೆದರಿಗೆ ಹಾಕಿರುವುದಾಗಿ ಆಶಾ ಹಿರಿಯಡ್ಕ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಅನ್ಯಕೋಮಿನ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಅಜೆಕಾರಿನ ವ್ಯಕ್ತಿ – ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ದೂರು
Recent Comments
ಕಗ್ಗದ ಸಂದೇಶ
on