ಕಾಬೂಲ್: ಅಫಘಾನಿಸ್ಥಾನದಲ್ಲಿ ಬುಧವಾರ ನಸುಕಿನ ವೇಳೆ ಸಂಭವಿಸಿದ ಪ್ರಬಲ ಭೂಕಂಪದಲ್ಲಿ 250ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿ ಅಪಾರ ಹಾನಿ ಸಂಭವಿಸಿರುವ ಕುರಿತು ವರದಿಯಾಗಿದೆ.
ಭೂಕಂಪನದ ತೀವ್ರತೆ ರಿಕ್ಟರ್ ಮಾಪಕದಲ್ಲಿ 6.1ರಷ್ಟು ದಾಖಲಾಗಿದೆ ಎಂದು ಅಮೆರಿಕದ ಭೂಗರ್ಭ ಶಾಸ್ತ್ರಜ್ಞರು ಹೇಳಿದ್ದಾರೆ.
ಪಾಕಿಸ್ಥಾನದ ಗಡಿ ಸಮೀಪ ಖೋಸ್ತ್ ನಗರದಿಂದ 44 ಕಿ.ಮೀ.ದೂರದಲ್ಲಿ ಭೂಕಂಪ ಕೇಂದ್ರವಿತ್ತು. ಪಾಕಿಸ್ಥಾನದ ಹಲವೆಡೆಗಳಲ್ಲೂ ಭೂಕಂಪ ಅನುಭವಕ್ಕೆ ಬಂದಿದೆ. ಲಾಹೋರ್, ಮುಲ್ತಾನ್, ಕ್ವೆಟ್ಟಾ, ಸೇರಿ ಪಾಕಿಸ್ಥಾನದ ಕೆಲವು ನಗರಗಳಲ್ಲಿ ಭೂಮಿ ನಡುಗಿದೆ.
ಹಲವು ಸೆಕುಂಡು ಭೂಮಿ ಕಂಪಿಸಿದ್ದು, ಜನರು ಮನೆಗಳಿಂದ ಹೊರಗೋಡಿ ಬಂದರು. ಹಲವು ಕಟ್ಟಡಗಳು ಕುಸಿದಿರುವ ಬಗ್ಗೆ ವರದಿಯಾಗಿದೆ. ನಾಶ ನಾಷ್ಟ ಮತ್ತು ಪ್ರಾಣಹಾನಿಯ ನಿಖರ ಮಾಹಿತಿ ಇನ್ನೂ ದೊರಕಿಲ್ಲ. ಸದ್ಯದ ಅಂದಾಜಿನ ಪ್ರಕಾಸರ ಸಾವುನೋವು ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.
ಪ್ರಬಲ ಭೂಕಂಪ : 250ಕ್ಕೂ ಹೆಚ್ಚು ಸಾವು
Recent Comments
ಕಗ್ಗದ ಸಂದೇಶ
on