ಹೊಸ್ಮಾರು : ಕರ್ನಾಟಕ ಪಬ್ಲಿಕ್ ಸ್ಕೂಲ್ ಪೌಢಶಾಲಾ ವಿಭಾಗದಲ್ಲಿ ವಿದ್ಯಾರ್ಥಿಗಳಲ್ಲಿ ಚುನಾವಣೆ ಬಗ್ಗೆ ಅರಿವು ಮೂಡಿಸಲು ಮೊಬೈಲ್ ಮೂಲಕ ಇವಿಎಂ ಅಪ್ಲಿಕೇಶನ್ ಬಳಸಿ ಇಂದು ಚುನಾವಣೆ ನಡೆಸಲಾಯಿತು. ಸಾರ್ವತ್ರಿಕ ಚುನಾವಣೆ ಪ್ರಕ್ರಿಯೆಯಂತೆ ಚುನಾವಣೆಗೆ ವಿದ್ಯಾರ್ಥಿಗಳಿಂದ ನಾಮಪತ್ರ ಸಲ್ಲಿಕೆ, ಪರಿಶೀಲನೆ, ನಾಮಪತ್ರ ಹಿಂತೆಗೆತ, ಅಭ್ಯರ್ಥಿಗಳಿಗೆ ಚಿಹ್ನೆ ನೀಡುವಿಕೆ, ಚುನಾವಣಾ ಪ್ರಚಾರ ಇತ್ಯಾದಿ ಪ್ರಕ್ರಿಯೆಗಳನ್ನು ನಡೆಸಲಾಯಿತು. ಶಾಲಾ ಉಪ ಪ್ರಾಂಶುಪಾಲ ದಿವಾಕರ ಹೆಗ್ಡೆ ವಿದ್ಯಾರ್ಥಿಗಳಿಗೆ ಮತದಾನದ ಮಹತ್ವ ಮತ್ತು ವಿವಿಧ ಚುನಾವಣಾ ಅಧಿಕಾರಿಗಳ ಕರ್ತವ್ಯ ಹಾಗೂ ಮತ ಎಣಿಕೆ ಪ್ರಕ್ರಿಯೆಗಳ ಬಗ್ಗೆ ಮಾಹಿತಿ ನೀಡಿದರು. ಶಾಲಾ ಸಂಸತ್ತಿನ ನೋಡಲ್ ಶಿಕ್ಷಕ ರಂಜಿತ್ ಕುಮಾರ್ ಶೆಟ್ಟಿ ಇವಿಎಂ ಬಗ್ಗೆ ಮಾಹಿತಿ ನೀಡಿ ವಿದ್ಯಾರ್ಥಿಗಳು ಹೇಗೆ ಮತಚಲಾವಣೆ ಮಾಡಬೇಕೇಂಬುದರ ಬಗ್ಗೆ ಪ್ರಾತ್ಯಕ್ಷಿತೆ ನೀಡಿದರು. ವಿದ್ಯಾರ್ಥಿಗಳು ಚುನಾವಣಾ ಅಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಿದರು. ಶಾಲಾ ಶಿಕ್ಷಕರು ಮಾರ್ಗದರ್ಶನ ನೀಡಿ ನಂತರ ನಡೆದ ಚುನಾವಣೆಯಲ್ಲಿ ಶಾಲಾ ವಿದ್ಯಾರ್ಥಿ ನಾಯಕಿಯಾಗಿ ಚೈತ್ರ ಹಾಗು ವಿರೋದ ಪಕ್ಷದ ನಾಯಕಿಯಾಗಿ ಸ್ಮಿತಾ ಆಯ್ಕೆಯಾದರು.
ಹೊಸ್ಮಾರು : ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ವಿನೂತನ ಪ್ರಯೋಗ – ಇವಿಎಂ ಬಳಸಿ ಶಾಲಾ ಸಂಸತ್ತಿನ ಚುನಾವಣೆ





















